ಮಧೂರು: ಶ್ರೀ ಪುಷ್ಪಕ ಬ್ರಾಹ್ಮಣ ಸೇವಾ ಸಂಘ ಕಾಸರಗೋಡು ಪ್ರಾದೇಶಿಕ ಸಮಿತಿ ಸಭೆ ಕೆ.ಪಿ ರಾಜೀವ್ ಅವರ ಅಧ್ಯಕ್ಷತೆಯಲ್ಲಿ ಪರಕ್ಕಿಲ ಕೆ. ಗಣೇಶನ್ ಅವರ ವಸತಿಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಉತ್ತರ ವಲಯ ಕಾರ್ಯದರ್ಶಿ ಕೆ.ಎಂ.ಸನೋಜ್ ಉದ್ಘಾಟಿಸಿ ಸಂಘದ ಕುರಿತು ಮಾತನಾಡಿದರು. ಕೇಂದ್ರ ವಿದ್ಯಾಭ್ಯಾಸ ಉಪ ಸಮಿತಿ ಕಾರ್ಯದರ್ಶಿ ವಿ.ಎಂ. ಕೃಷ್ಣ ಪ್ರಸಾದ್ ಮಾತನಾಡಿದರು. ಸಂಘದ ಗತ ವರ್ಷದ ವರದಿ ಮತ್ತು ಲೆಕ್ಕಪತ್ರಗಳನ್ನು ರಾಜೇಂದ್ರನ್. ವಿ.ವಿ ಮಂಡಿಸಿದರು. ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಯಿತು.
ಬಳಿಕ ನೂತನ ಪದಾಧಿಕಾರಿಗಳನ್ನು ಕೆ.ಎಂ. ಸನೋಜ್ ಹಾಗೂ ಕೆ.ಎಂ. ಸುಮಾರ ಅವರ ಸಮಕ್ಷದಲ್ಲಿ ಆರಿಸಲಾಯಿತು. ರಕ್ಷಾಧಿಕಾರಿಯಾಗಿ ಬಾಲಕೃಷ್ಣ ಉಳಿಯ, ಅಧ್ಯಕ್ಷರಾಗಿ ಕೆ.ಎಂ.ಪದ್ಮನಾಭನ್, ಉಪಾಧ್ಯಕ್ಷರಾಗಿ ಶಂಕರ್ ರಾಜ, ಕಾರ್ಯದರ್ಶಿಯಾಗಿ.ವಿ.ವಿ ರಾಜೀವನ್, ಜೊತೆ ಕಾರ್ಯದರ್ಶಿಯಾಗಿ ಹರಿ.ಆರ್ ಬೇಳ, ಖಜಾಂಜಿಯಾಗಿ ಪ್ರೀಯ, ಲೆಕ್ಕ ಪರಿಶೋಧಕರಾಗಿ ಎ.ವೇಣುಗೋಪಾಲ ಹಾಗೂ ಆರು ಮಂದಿ ಸದಸ್ಯರನ್ನು ಒಳಗೊಂಡ ಕಾರ್ಯಾಕಾರಿ ಸಮಿತಿಯನ್ನು ರೂಪಿಕರಿಸಲಾಯಿತು. ರಾಜೇಂದ್ರನ್.ವಿ.ವಿ ಸ್ವಾಗತಿಸಿ, ಪ್ರೀಯ ವಂದಿಸಿದರು.