ಗೋರಕ್‌ಪುರ: ಗೋರಕ್‌ಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರು ವಿನೂತನ ರೀತಿಯಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದರು. ಪಕ್ಷೇತರ ಅಭ್ಯರ್ಥಿ ರಾಜನ್ ಯಾದವ್ ಮಂಗಳವಾರ ಚಟ್ಟದಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
ಗೋರಕ್‌ಪುರ: ಗೋರಕ್‌ಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರು ವಿನೂತನ ರೀತಿಯಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದರು. ಪಕ್ಷೇತರ ಅಭ್ಯರ್ಥಿ ರಾಜನ್ ಯಾದವ್ ಮಂಗಳವಾರ ಚಟ್ಟದಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
'ಅರ್ತಿ ಬಾಬಾ' ಎಂದೇ ಹೆಸರಾದ ಯಾದವ್, ತಾವು ಎಂಬಿಎ ಪದವೀಧರ ಎಂದು ಹೇಳಿಕೊಂಡಿದ್ದಾರೆ.
ಸ್ಮಶಾನದಲ್ಲಿ ತನ್ನ ಚುನಾವಣಾ ಕಚೇರಿ ತೆರೆದಿರುವ ಯಾದವ್, ವಾಹನ ಸಂಚಾರ ದಂಡದಂತಹ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುವುದಾಗಿ ಹೇಳುತ್ತಾರೆ. 'ನಿರುದ್ಯೋಗಿ ಕಾರ್ಮಿಕ ಎಲ್ಲಿಂದ ಅಷ್ಟು ದಂಡ ತೆರುವುದು' ಎನ್ನುವುದು ಅವರ ಪ್ರಶ್ನೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಅವಿವಾಹಿತರಾಗಿ ಉಳಿಯುವುದಾಗಿ ಅವರು ಹೇಳಿದ್ದಾರೆ.