ಕಾಸರಗೋಡು: ಲಯನ್ಸ್ ಕ್ಲಬ್ ಆಫ್ ವಿದ್ಯಾನಗರದ ವತಿಯಿಂದ ಮಂಗಳೂರು ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಕಾಸರಗೋಡು ಬಂಜೆತನ ನಿವಾರಣಾ ಉಚಿತ ಶಿಬಿರ ಜನರಲ್ ಆಸ್ಪತ್ರೆಯ ವಿದ್ಯಾನಗರ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಿತು.
ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ಶ್ವಾಸಕೋಶ ರೋಗ ತಜ್ಞ ಡಾ.ಅಬ್ದುಲ್ ಸತ್ತಾರ್ ಎ.ಎ ಸಾರಂಬ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಎ.ನಾಸರ್ ಅಧ್ಯಕ್ಷತೆ ವಹಿಸಿದ್ದರು. ಫಲವತ್ತತೆ ತಜ್ಞ ಡಾ.ಶೆವಿಸ್ ಫೈಝಿ, ವಿನೋದ್ ಪಾಲೋತ್, ಸುಲೈಖಾ ಮಾಹಿನ್, ರಂಜು ಪಿ.ಎಂ., ಮ್ಯಾಥ್ಯೂ ಪಿ.ಎ ಉಪಸ್ಥಿತರಿದ್ದರು.