ಕಾಸರಗೋಡು: ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಕಾಸರಗೋಡು ತಾಲೂಕು ಮಹಾಸಭೆ ಮತ್ತು ಸಂಘಟನೆ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ಶನಿವಾರ 18 ರಂದು ಕಾಸರಗೋಡು ವ್ಯಾಪಾರಿ ಭವನ ಸಭಾಂಗಣದಲ್ಲಿ ನಡೆಯಿತು.
ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಗಿರೀಶ್ ಸಮಾರಂಭ ಉದ್ಘಾಟಿಸಿದರು. ತಾಲೂಕು ಸಮಿತಿ ಅಧ್ಯಕ್ಷ ಎ.ಎಂ.ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಿ.ಎ.ಮುಹಮ್ಮದ್‍ಕುಞÂ ಚಟುವಟಿಕೆ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಕೋಶಾಧಿಕಾರಿ ಎಸ್. ರಾಧಾಕೃಷ್ಣ ಸ್ವಾಗತಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಕಾರ್ಯದರ್ಶಿ ಟಿ. ಲಕ್ಷ್ಮಣನ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ತಾಲೂಕು ಘಟಕ ಅಧ್ಯಕ್ಷರಾಗಿ ಬಿ.ಸಿ.ಮಧುಸೂದನ್, ಉಪಾಧ್ಯಕ್ಷರಾಗಿ ಕೆ.ಎನ್.ಬಾಲಕೃಷ್ಣನ್ ಮತ್ತು ಜನಾರ್ದನನ್ ಜೈಶಾಲ್, ಕಾರ್ಯದರ್ಶಿಯಾಗಿ ಸಿ.ಎ.ಮುಹಮ್ಮದ್‍ಕುಞÂ, ಜತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಬಶೀರ್ ಮತ್ತು ಅಬೂಬಕರ್ ಪಟ್ಲ, ಕೋಶಾಧಿಕಾರಿಯಾಗಿ ಶರತ್ ದುರ್ಗಾ ಆಯ್ಕೆಯಾದರು.