ಪೆರ್ಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನ ಜಾಗೃತಿ ವೇದಿಕೆ ಹಾಗೂ ಯೋಜನೆಯ ವಲಯ ಒಕ್ಕೂಟ, ವಿವಿಧ ಸಮಿತಿಗಳ ಸಹಕಾರದೊಂದಿಗೆ ಸಾಮಾಜಿಕ ಸ್ವಾಸ್ಥ್ಯ ಸಂಕಲ್ಪದೊಂದಿಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಮದ್ಯವರ್ಜನ ಶಿಬಿರವನ್ನು ಪೆರ್ಲದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಇಡಿಯಡ್ಕ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಸಾಮಾಜಿಕ,ಧಾರ್ಮಿಕ ಮುಂದಾಳು ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ವಹಿಸಿದ್ದರು.
ಯೋಜನೆಯ ನಿರ್ದೇಶಕ ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನ ಜಾಗೃತಿ ವೇದಿಕೆಯ ಉಡುಪಿ ವಲಯಾಧಿಕಾರಿ ಗಣೇಶ್ ಆಚಾರ್ಯ ಶಿಬಿರದ ಪೂರ್ಣ ಮಾಹಿತಿ ನೀಡಿದರು. ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂ.ಸದಸ್ಯ ಕೆ.ಪಿ.ಅನಿಲ್ ಕುಮಾರ್, ಪೆರ್ಲ ವಲಯ ಮೇಲ್ವಿಚಾರಕಿ ಜಯಶ್ರೀ, ಜನ ಜಾಗೃತಿ ವೇದಿಕೆಯ ಅಶ್ವಥ್ ಪೂಜಾರಿ ಲಾಲ್ ಭಾಗ್, ಹರೀಶ್ ಶೆಟ್ಟಿ ಕಡಂಬಾರು, ವಲಯ ಅಧ್ಯಕ್ಷ ಬಿ.ಪಿ.ಶೇಣಿ, ಇಡಿಯಡ್ಕ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಸದಾನಂದ ಮಾಸ್ತರ್, ಡಾ.ಸ್ಪಪ್ನಾ ಜಯಗೋವಿಂದ, ಒಕ್ಕೂಟದ ವಲಯಾಧ್ಯಕ್ಷ ಶ್ರೀಧರ ಮಣಿಯಾಣಿ, ಭಜನಾ ಪರಿಷತ್ ವಲಯಾಧ್ಯಕ್ಷ ಶ್ರೀಧರ್ ನಾಯಕ್, ಟಿ.ಪ್ರಸಾದ್, ಮಾಸ್ಟರ್ ಸುರೇಂದ್ರ ಬಿ, ನವಜೀವನ ಸಮಿತಿ ಅಧ್ಯಕ್ಷ ಸುರೇಂದ್ರ ಬಿ, ಜಿ.ಪಂ. ಮಾಜಿ ಸದಸ್ಯೆ ಪುಷ್ಪಾ ಅಮೆಕ್ಕಳ, ಉದಯ ಚೆಟ್ಟಿಯಾರ್, ಮಹೇಶ್ ಪುಣಿಯೂರು, ಜಯ ಮಣಿಯಂಪಾರೆ, ಸೇವಾ ಪ್ರತಿನಿಧಿಗಳು, ನವಜೀವನ, ಶೌರ್ಯ ಸಮಿತಿ ಹಾಗೂ ಒಕ್ಕೂಟದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಶಿಬಿರದ ಯಶಸ್ವಿಗಾಗಿ ಸ್ವಾಗತ ಸಮಿತಿ ರೂಪೀಕರಿಸಲಾಯಿತು. ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲ ಸುವರ್ಣ ಸ್ವಾಗತಿಸಿ ತಲಪಾಡಿ ವಲಯ ಮೇಲ್ವಿಚಾರಕ ಭಾಸ್ಕರ ನಿರೂಪಿಸಿದರು.