HEALTH TIPS

ಅಸ್ಟ್ರಝೆನೆಕಾದ ಕೋವಿಡ್ ಲಸಿಕೆಯಿಂದ ಮಾರಣಾಂತಿಕ ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆ : ವರದಿ

 ಅಸ್ಟ್ರಝೆನೆಕಾದ ಕೋವಿಡ್ ಲಸಿಕೆಯಿಂದ ಮಾರಣಾಂತಿಕ ರಕ್ತ ಹೆಪ್ಪುಗಟ್ಟುವಿಕೆ ಸಾಧ್ಯತೆಯಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಈ ಆರೋಗ್ಯ ಸಮಸ್ಯೆಯನ್ನು Vaccine-induced immune thrombocytopenia and thrombosis (VITT) ಎಂದು ಕರೆಯಲಾಗುತ್ತದೆ.

ಅಸ್ಟ್ರಝೆನೆಕಾ ಲಸಿಕೆ ಪಡೆದ ಕೆಲವರಲ್ಲಿ ಈ ರೋಗ ಲಕ್ಷಣ ಕಂಡು ಬಂದಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Vaccine-induced immune thrombocytopenia and thrombosis (VITT)ಗೆ ಕಾರಣವಾಗುವ ಪ್ರತಿಕಾಯಗಳು ಅಪರೂಪವಾದ ಅಡಿನೊವೈರಲ್ ವೆಕ್ಟರ್ ವಿಐಟಿಟಿ ಅಸ್ವಸ್ಥತೆ ಪ್ರಕರಣಗಳಲ್ಲಿ ಕಂಡು ಬರುವ ಅಣ್ವಿಕ ಹೆಜ್ಜೆ ಗುರುತುಗಳೊಂದಿಗೆ ಹೋಲಿಕೆ ಹೊಂದಿರುವುದು ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾಲಯ ಹಾಗೂ ಇನ್ನಿತರ ಅಂತಾರಾಷ್ಟ್ರೀಯ ತಜ್ಞರು ನಡೆಸಿರುವ ಅಧ್ಯಯನದಲ್ಲಿ ಕಂಡು ಬಂದಿದೆ.

ಲಸಿಕೆ ಸುರಕ್ಷತೆ ಹಾಗೂ ಅಭಿವೃದ್ಧಿಯ ಮೇಲೆ ಈ ಸಂಶೋಧನೆಗಳು ಗಮನಾರ್ಹ ಪರಿಣಾಮವನ್ನು ಬೀರಲಿವೆ. ತನ್ನ ಲಸಿಕೆಯು TTS(Thrombotic thrombocytopenic syndrome) ಸೇರಿದಂತೆ ಕೆಲವು ವಿರಳ ಅಡ್ಡ ಪರಿಣಾಮಗಳನ್ನು ಹೊಂದಿರುವುದನ್ನು ಒಪ್ಪಿಕೊಂಡಿದ್ದ ಅಸ್ಟ್ರಝೆನೆಕಾ, ಹಲವಾರು ಜಾಗತಿಕ ಮಾರುಕಟ್ಟೆಗಳಿಂದ ತನ್ನ ಲಸಿಕೆಯನ್ನು ಹಿಂಪಡೆದಿತ್ತು.

ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಯೂರೋಪ್ ನಲ್ಲಿ ವ್ಯಾಕ್ಸ್ ಝೆವ್ರಿಯ ಎಂದು ಕರೆಯಲಾಗುವ ತನ್ನ ಕೋವಿಡ್-19 ಲಸಿಕೆಯಲ್ಲಿ ತೀವ್ರ ಸ್ವರೂಪದ ಅಡ್ಡ ಪರಿಣಾಮಗಳಿರುವುದರಿಂದ ಅಸ್ಟ್ರಝೆನೆಕಾ ತೀವ್ರ ಟೀಕೆಗೆ ಗುರಿಯಾಗಿದೆ. ಲಸಿಕೆಗಳ ವಿರಳ ಅಡ್ಡ ಪರಿಣಾಮಗಳ ಹಿಂದಿರುವ ತಾಂತ್ರಿಕತೆಯನ್ನು ಅರ್ಥ ಮಾಡಿಕೊಳ್ಳಬೇಕಾದ ಮಹತ್ವವನ್ನು ಎತ್ತಿ ತೋರಿಸಿರುವ ಈ ಅಧ್ಯಯನವು, ಸುರಕ್ಷತಾ ಶಿಷ್ಟಾಚಾರಗಳ ಬಲವರ್ಧನೆ ಹಾಗೂ ಭವಿಷ್ಯದ ಲಸಿಕೆ ಅಭಿವೃದ್ಧಿಯ ಕುರಿತು ಮಾಹಿತಿ ನೀಡುವುದರ ಮಹತ್ವದತ್ತ ಬೊಟ್ಟು ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries