HEALTH TIPS

ಬೇಸಿಗೆ: ದೇಶದ ವಿದ್ಯುತ್‌ ಬೇಡಿಕೆ ಹೆಚ್ಚಳ

            ವದೆಹಲಿ: ಪ್ರಸಕ್ತ ಬೇಸಿಗೆಯಲ್ಲಿ ದೇಶದ ವಿದ್ಯುತ್‌ ಬೇಡಿಕೆಯು ಶುಕ್ರವಾರ 239.96 ಗಿಗಾವಾಟ್‌ಗೆ ಹೆಚ್ಚಳವಾಗಿದೆ.

           ದೇಶದ ಬಹುತೇಕ ಭಾಗದಲ್ಲಿ ತಾಪಮಾನದ ತೀವ್ರ ಹೆಚ್ಚಳದಿಂದಾಗಿ ಹವಾ ನಿಯಂತ್ರಕ, ಕೂಲರ್ಸ್‌ಗಳ ಬಳಕೆಯಲ್ಲಿ ಏರಿಕೆಯಾಗಿದೆ. ಇದರಿಂದ ವಿದ್ಯುತ್‌ ಬೇಡಿಕೆ ಹೆಚ್ಚಳವಾಗಿದೆ.

ಇದು ಈ ವರ್ಷದ ಬೇಸಿಗೆಯಲ್ಲಿ ಇದುವರೆಗಿನ ಗರಿಷ್ಠ ಬೇಡಿಕೆ ಎಂದು ವಿದ್ಯುತ್ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.

             ಬುಧವಾರ 235.06 ಗಿಗಾವಾಟ್‌ ಮತ್ತು ಗುರುವಾರ 236.59 ಗಿಗಾವಾಟ್‌ ವಿದ್ಯುತ್‌ ಬೇಡಿಕೆ ಇತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿದ್ಯುತ್‌ ಬೇಡಿಕೆಯು ಸಾರ್ವಕಾಲಿಕ ಗರಿಷ್ಠ 243.27 ಗಿಗಾವಾಟ್‌ ದಾಖಲಾಗಿತ್ತು.

              ವಿದ್ಯುತ್‌ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ವಿದ್ಯುತ್‌ ಬೇಡಿಕೆಯು ಮೇ ನಲ್ಲಿ ಹಗಲಿನ ವೇಳೆ 235 ಗಿಗಾವಾಟ್‌, ಸಂಜೆ ವೇಳೆ 225 ಗಿಗಾವಾಟ್‌ ಇರಲಿದೆ. ಜೂನ್‌ನಲ್ಲಿ ಹಗಲು 240 ಗಿಗಾವಾಟ್‌ ಮತ್ತು ಸಂಜೆ 235 ಗಿಗಾವಾಟ್‌ನಷ್ಟು ಇರಲಿದೆ. ಇದಲ್ಲದೇ ಈ ಬೇಸಿಗೆ ಅವಧಿಯಲ್ಲಿ ಬೇಡಿಕೆಯು 260 ಗಿಗಾವಾಟ್‌ನ್ನು ಮುಟ್ಟಲಿದೆ ಎಂದು ಅಂದಾಜಿಸಿದೆ.

              ಮಾರ್ಚ್‌ನಲ್ಲಿ, ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಬೇಸಿಗೆಯು ಹೆಚ್ಚಿನ ಉಷ್ಣಾಂಶದಿಂದ ಕೂಡಿರಲಿದೆ ಮತ್ತು ಎಲ್‌ ನಿನೊ ಕನಿಷ್ಠ ಮೇ ವರೆಗೆ ಮುಂದುವರಿಯುತ್ತದೆ ಎಂದು ಅಂದಾಜಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries