ಕಾಸರಗೋಡು: ಪೆರಿಯ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದ ನಾಲ್ಕನೇ ದಿನ ಖ್ಯಾತ ನರ್ತಕಿ ಕೃಷ್ಣವೇಣಿ ಟೀಚರ್ ಅವರ ನೇತೃತ್ವದಲ್ಲಿ ನಡೆದ ನೃತ್ಯ ಸಂಜೆ ಪ್ರೇಕ್ಷಕರ ಮನಸೆಳೆಯಿತು. ಭರತನಾಟ್ಯ ಮತ್ತು ಕೇರಳದ ನೃತ್ಯ ಪ್ರಕಾರವಾದ ಮೋಹಿನಿಯಾಟ್ಟಂ ಪ್ರದರ್ಶನದಿಂದ ನೃತ್ಯ ರಸಿಕರಿಗೆ ವಿಶೇಷತೆಯ ಅನುಭವವಾಯಿತು.
ಬಳಿಕ ಅಖಿಲಾ ಕಾಯರ್ತಾಯ, ಶ್ರೀದೇವಿ ಪ್ರಶಾಂತ್ ಮತ್ತು ದಿವ್ಯಾ ವೇಣುಗೋಪಾಲ್ ಚೆನ್ನೈ ಅವರಿಂದ ಭರತನಾಟ್ಯ ಮತ್ತು ಶಿವಾನಿ ಕೂಡ್ಲು ಅವರಿಂದ ಮೋಹಿನಿಯಾಟ್ಟಂ ನಡೆಯಿತು. ಪಾತೆನ ಯೋಗಕ್ಷೇಮ ಸಭಾ ಮಹಿಳಾ ವಿಭಾಗದಿಂದ ಗೋಪಿಕಾ ನೃತ್ಯ, ಮಾವುಂಗಲ್ ಆಂಜನೇಯಂ ತಂಡದಿಂದ ಕೈಕೊಟ್ಟುಕಳಿ, ಕರಂದಕ್ಕಾಡು ಮಕ್ಕಳ ತಂಡದಿಂದ ಯೋಗ ನೃತ್ಯ ನಡೆಯಿತು.