ಕುಂಬಳೆ: 'ಕುಡಾಲ್ಡ ಜವ್ವಣೆರ್' ವಾಟ್ಸಾಪ್ ಗ್ರೂಪಿನ ವಿದ್ಯಾ ಜ್ಯೋತಿ ಯೋಜನೆಯ ನಗದು ಬಹುಮಾನದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಚೀವಾರು ಶ್ರೀಶಾರದಾ ಎ ಯು ಪಿ ಶಾಲೆಯಲ್ಲಿ ಜರಗಿತು.
ಗ್ರೂಪಿನ ಗುರಿಕ್ಕಾರರಾದ ಕೊಡುಗೈ ದಾನಿ ಉದ್ಯಮಿ ಕುಡಾಲು ಗುತ್ತು ಗಣೇಶ ರೈ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಬಿಡಿಓ ಹಾಗೂ ಪೈವಳಿಕೆ ಗ್ರಾಪಂ ಸದಸ್ಯ ಅಬ್ದುಲ್ಲ ಸಮಾರಂಭ ಉದ್ಘಾಟಿಸಿದರು. ಚೇವಾರು ಶ್ರೀ ಶಾರದಾ ಎ ಯು ಪಿ ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ಮಾಸ್ಟರ್, ಶ್ರೀದುರ್ಗಾಪರಮೇಶ್ವರಿ ಪದವಿಪೂರ್ವ ವಿದ್ಯಾಲಯದ ಪ್ರಾಧ್ಯಾಪಕ ಸತೀಶ್ ಕುಮಾರ್ ಶೆಟ್ಟಿ, ಹಿರಿಯ ಪತ್ರಕರ್ತ, ಪೈವಳಿಕೆ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಅಚ್ಯುತ ಚೇವಾರು, ಕುಡಾಲು ವಾರ್ಡಿನ ಜನಪ್ರತಿನಿಧಿ ಅಶೋಕ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭ ಶ್ರೀದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಎಡಕ್ಕಾನ ಹಳ್ಳಕೋಡ್ಲು ಗೋವಿಂದ ಭಟ್ಟ ಅವರನ್ನು ಸನ್ಮಾನಿಸಲಾಯಿತು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಸಾಮಾಜಿಕ ಸಾಂಸ್ಕøತಿ ಮುಂದಾಳು, ಪತ್ರಕರ್ತ ಎ.ಆರ್. ಸುಬ್ಬಯ್ಯ ಕಟ್ಟೆ, ಕ್ರೀಡಾರಂಗದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ದಿಲ್ಲು (ಟಿಎಎಸ್‍ಸಿ ) ಹಿರಿಯ ಸಾಮಾಜಿಕ ಮುಂದಾಳು ಅನಿವಾಸಿ ಭಾರತೀಯ ಉದ್ಯಮಿ ಬಿ.ಎ ಖಾದರ್ ಹಾಗೂ ಕುಡಾಲ್ಡ ಜವ್ವಣೆರ್ ಗ್ರೂಪಿನ ಅಧ್ಯಕ್ಷ ಕುಡಾಲು ಗುತ್ತುಗಣೇಶ್ ರೈ ಮೊದಲಾದ ಸಾಧಕರನ್ನು ಸನ್ಮಾನಿಸಲಾಯಿತು.
ಕೇರಳ ರಾಜ್ಯ ಶಾಲಾ ಕಲೋತ್ಸವದ ರಾಜ್ಯ ಮಟ್ಟದಲ್ಲಿ ಹಿಂದಿ ಕಂಠಪಾಟ ವಿಭಾಗದಲ್ಲಿ ಸ್ಪರ್ಧಿಸಿ ಎ ಗ್ರೇಡ್ ಪಡೆದ ಎಸ್‍ಡಿಪಿಎಚ್‍ಎಸ್‍ಎಸ್ ಧರ್ಮತ್ತಡ ದ ಹತ್ತನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಡೇನಿಕಾ ಪಹಲ್ ಆರ್ ಅವರಿಗೆ ಕುಡಾಲ್ಡ ಜವ್ವಣೆರ್ ಗ್ರೂಪಿನ ಅಭಿನಂದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕುಡಾಲು ಮೇರ್ಕಳ ಗ್ರಾಮದ ಎಸ್ಸೆಸೆಲ್ಸಿ ಹಾಗೂ ಪ್ಲಸ್ ಟು ವಿಭಾಗದಲ್ಲಿ ಎಲ್ಲಾ ವಿಭಾಗಗಳಲ್ಲಿಯೂ ಎ ಪ್ಲಸ್ ಪಡೆದವರನ್ನು, ಎಲ್ಲೆಸ್ಸೆಸ್ ಹಾಗೂ ಯುಎಸ್ಸೆಸ್ ಪರೀಕ್ಷೆಗಳಲ್ಲಿ ವಿಜೇತರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಬಿ.ಎ ಲತೀಫ್ ವಂದಿಸಿದರು.