ಲಕ್ನೋ: ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುವುದು, ಲಕ್ಷಾಧಿಪತಿಗಳು ದಿವಾಳಿಯಾಗುವುದು ಮುಂತಾದ ಘಟನೆಗಳನ್ನು ಆಗೊಮ್ಮೆ ಈಗೊಮ್ಮೆ ಕೇಳುತ್ತಲೇ ಇರುತ್ತೇವೆ. ಇತ್ತೀಚೆಗಷ್ಟೇ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.
ಲಕ್ನೋ: ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುವುದು, ಲಕ್ಷಾಧಿಪತಿಗಳು ದಿವಾಳಿಯಾಗುವುದು ಮುಂತಾದ ಘಟನೆಗಳನ್ನು ಆಗೊಮ್ಮೆ ಈಗೊಮ್ಮೆ ಕೇಳುತ್ತಲೇ ಇರುತ್ತೇವೆ. ಇತ್ತೀಚೆಗಷ್ಟೇ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.
ಉತ್ತರ ಪ್ರದೇಶದ ವಡೋಹಿ ಜಿಲ್ಲೆಯ ನಿವಾಸಿಯಾಗಿರುವ ಭಾನು ಪ್ರಸಾದ್ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಸಾಮಾನ್ಯ ರೈತನ ಖಾತೆಗೆ 9,990 ಕೋಟಿ ರೂ.ಗಳು ಹೇಗೆ ಬಂದವು ಎಂಬ ಗೊಂದಲವೂ ಬ್ಯಾಂಕ್ ಅಧಿಕಾರಿಗಳಲ್ಲಿತ್ತು. ತಾಂತ್ರಿಕ ಸಮಸ್ಯೆಯಿಂದ ರೈತರ ಖಾತೆಗೆ ಇಷ್ಟು ಹಣ ಜಮಾ ಆಗಿರುವುದು ತನಿಖೆ ವೇಳೆ ಪತ್ತೆಯಾಗಿದೆ.
ವಾಸ್ತವವಾಗಿ ಭಾನು ಪ್ರಕಾಶ್ ಅವರ ಖಾತೆಯು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಖಾತೆಯಾಗಿದ್ದು, ತಾಂತ್ರಿಕ ಸಮಸ್ಯೆಯಿಂದ ಅವರ ಖಾತೆಗೆ ಭಾರಿ ಮೊತ್ತದ ಹಣ ಜಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಪ್ಪನ್ನು ಸರಿಪಡಿಸಿ ಅವರ ಖಾತೆಯಲ್ಲಿದ್ದ ಸಂಪೂರ್ಣ ಹಣ ವಾಪಸ್ ಪಡೆಯಲಾಗಿದೆ. ರಾತ್ರೋರಾತ್ರಿ 10 ಸಾವಿರ ಕೋಟಿ ರೂ.ಗಳ ಒಡೆಯನಾದ ಭಾನು ಪ್ರಸಾದ್ ಗೆ ಒಂದು ರೂಪಾಯಿ ಕೂಡ ಸಿಗಲಿಲ್ಲ. ಸಮಸ್ಯೆ ಬಗೆಹರಿಯುವವರೆಗೂ ಬ್ಯಾಂಕ್ ಅಧಿಕಾರಿಗಳು ಅವರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.