HEALTH TIPS

ಪ್ಯಾಲೆಸ್ಟೀನ್‌ಗೆ ವಿಶ್ವಸಂಸ್ಥೆ ಸದಸ್ಯತ್ವ -ನಿರ್ಣಯಕ್ಕೆ ಅಸ್ತು

           ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪೂರ್ಣಾವಧಿ ಸದಸ್ಯತ್ವ ಪಡೆಯಲು ಪ್ಯಾಲೆಸ್ಟೀನ್‌ ಅರ್ಹವಾಗಿದ್ದು, ಅದಕ್ಕೆ ಸದಸ್ಯತ್ವ ನೀಡಬೇಕು ಎಂಬ ನಿರ್ಣಯದ ಪರವಾಗಿ ಭಾರತವು ಶುಕ್ರವಾರ ಮತಚಲಾಯಿಸಿತು.

           ಅಲ್ಲದೆ, ಈ ಪ್ರಸ್ತಾವವನ್ನು 'ಸಕಾರಾತ್ಮಕ'ವಾಗಿ ಪರಿಗಣಿಸಬೇಕು ಎಂದೂ ಭದ್ರತಾ ಮಂಡಳಿಗೆ ಶಿಫಾರಸು ಮಾಡಿತು.

                ಈ ಕುರಿತು ಚರ್ಚಿಸಲು 193 ಸದಸ್ಯ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತುರ್ತು ಅಧಿವೇಶನ ಇಲ್ಲಿ ನಡೆಯಿತು.

              ಪ್ಯಾಲೆಸ್ಟೀನ್‌ಗೆ ಸದಸ್ಯತ್ವ ನೀಡಬೇಕು ಎಂದು ಕೋರುವ ನಿರ್ಣಯದ ಪರವಾಗಿ 143 ಮತಗಳು, ವಿರುದ್ಧವಾಗಿ 9 ಮತಗಳು ಬಿದ್ದವು. 25 ರಾಷ್ಟ್ರಗಳು ಗೈರುಹಾಜರಾಗಿದ್ದವು. ಬಳಿಕ ಸಭೆ ಕರತಾಡನ ಮೂಲಕ ಮೆಚ್ಚುಗೆ ಸೂಚಿಸಿತು.

                   'ಪ್ಯಾಲೆಸ್ಟೀನ್‌ ವಿಶ್ವಸಂಸ್ಥೆಯ ಸದಸ್ಯತ್ವಕ್ಕೆ ಅರ್ಹವಾಗಿದೆ. ವಿಶ್ವಸಂಸ್ಥೆ ಸನ್ನದಿನ ವಿಧಿ 4ರ ಅನ್ವಯ ಸದಸ್ಯತ್ವಕ್ಕೆ ಮಾನ್ಯತೆ ನೀಡಬೇಕು' ಎಂದು ನಿರ್ಣಯ ಮಂಡಿಸಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries