ಶಿಮ್ಲಾ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದರೆ ಬಾಲಿವುಡ್‌ಗೆ ಗುಡ್ ಬೈ ಹೇಳುವುದಾಗಿ ಬಿಜೆಪಿ ಅಭ್ಯರ್ಥಿ ನಟಿ ಕಂಗನಾ ರಾನೌತ್ ಘೋಷಿಸಿದ್ದಾರೆ.
ಶಿಮ್ಲಾ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದರೆ ಬಾಲಿವುಡ್‌ಗೆ ಗುಡ್ ಬೈ ಹೇಳುವುದಾಗಿ ಬಿಜೆಪಿ ಅಭ್ಯರ್ಥಿ ನಟಿ ಕಂಗನಾ ರಾನೌತ್ ಘೋಷಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣ ಮುಕ್ತಾಯಗೊಳಿಸುತ್ತೇನೆ.
ಇದುವರೆಗೆ ನನಗೆ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಆದರೆ ಮುಂದಿನ ದಿನಗಳಲ್ಲಿ ಉತ್ತಮ ಸಂಸದ ಎಂದು ಜನರಿಂದ ಗೌರವ ಪಡೆದರೆ, ಅದೇ ನನಗೆ ಸಾರ್ಥಕ. ಬಿಜೆಪಿಯಲ್ಲಿ ನಮ್ಮ ಭರವಸೆ, ಮೋದಿಯವರ ಗ್ಯಾರಂಟಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಆದರೆ ಇತರ ಪಕ್ಷಗಳಲ್ಲಿ ನಮ್ಮಷ್ಟು ಕಟ್ಟುನಿಟ್ಟಾದ ಶಿಷ್ಟಾಚಾರ ಹೊಂದಿರುವುದನ್ನು ನಾನು ನೋಡಿಲ್ಲ. ಆದ್ದರಿಂದ ರಾಜಕೀಯ ರಂಗದಲ್ಲಿ ಸೇವೆ ಮಾಡಬೇಕು ಅನ್ನೋದು ನನ್ನ ಮುಂದಿನ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.