ರುದ್ರಪ್ರಯಾಗ: ದೇಶದ ಅತ್ಯಂತ ಹಳೆಯ ಮತ್ತು ಖ್ಯಾತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ಧಾಮ ಇಂದು ಶುಕ್ರವಾರ ಮುಂಜಾನೆ 7 ಗಂಟೆಗೆ ಭಕ್ತರ ದರುಶನಕ್ಕೆ ಮುಕ್ತವಾಗಿದೆ.
ಆರು ತಿಂಗಳ ನಂತರ ಆಚರಣೆಗಳು ಮತ್ತು ಸ್ತೋತ್ರಗಳ ವಿಧ್ಯುಕ್ತ ಪಠಣದ ಮೂಲಕ ದೇಗುಲದ ಬಾಗಿಲು ತೆರೆಯಲಾಯಿತು. ಸ್ತೋತ್ರ ಪಠಣ, ಭಕ್ತರ ಹರ್ಷೋದ್ಘಾರ ಮೂಲಕ ದೇಗುಲದ ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ನೆರೆದಿದ್ದ ಭಕ್ತರ ಗುಂಪಿನಿಂದ 'ಹರ ಹರ ಮಹಾದೇವ್' ಘೋಷಣೆಗಳು ಮೊಳಗಿದವು.
ದೇಶದ ಅತ್ಯಂತ ಪವಿತ್ರವಾದ ಪೂಜಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ಭಗವಾನ್ ಶಿವನ ದಾಮವನ್ನು 40 ಕ್ವಿಂಟಾಲ್ ಹೂವುಗಳ ದಳಗಳಿಂದ ಅಲಂಕರಿಸಲಾಗಿತ್ತು.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಪತ್ನಿ ಗೀತಾ ಧಾಮಿ ಅವರೊಂದಿಗೆ ಬಾಬಾ ಕೇದಾರನಾಥನ ದರ್ಶನಕ್ಕೆ ಆಗಮಿಸಿದ್ದರು. ಇಂದು ಅಕ್ಷಯ ತೃತೀಯ ಶುಭ ಸಂದರ್ಭದಲ್ಲಿ ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲು ತೆರೆಯಲಾಗಿದ್ದು, ಮೇ 12 ರಂದು ಬದರಿನಾಥ ಧಾಮದ ಬಾಗಿಲು ತೆರೆಯಲಾಗುತ್ತದೆ.
ಕೇದಾರನಾಥ ಧಾಮದ ಬಾಗಿಲು ತೆರೆಯುತ್ತಿದ್ದಂತೆ, ಹೆಲಿಕಾಪ್ಟರ್‌ಗಳು ದೇಗುಲದ ಮೇಲೆ ದಳಗಳನ್ನು ಸುರಿಸಿದವು. ದೇಶದ ಅತಿ ಎತ್ತರದ ಪ್ರದೇಶದಲ್ಲಿರುವ ದೇವಾಲಯಗಳು ಪ್ರತಿ ವರ್ಷ ಆರು ತಿಂಗಳ ಕಾಲ ಮುಚ್ಚಲ್ಪಡುತ್ತವೆ, ಬೇಸಿಗೆಯಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ತೆರೆಯಲಾಗುತ್ತದೆ. ಚಳಿಗಾಲದ ಆರಂಭದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಮುಚ್ಚಲಾಗುತ್ತದೆ.
ಚಾರ್ ಧಾಮ್ ಯಾತ್ರೆಯು ಹಿಂದೂ ಧರ್ಮದಲ್ಲಿ ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಯಾತ್ರೆಯನ್ನು ಸಾಮಾನ್ಯವಾಗಿ ಏಪ್ರಿಲ್-ಮೇ ನಿಂದ ಅಕ್ಟೋಬರ್-ನವೆಂಬರ್ ವರೆಗೆ ಕೈಗೊಳ್ಳಲಾಗುತ್ತದೆ.
ಚಾರ್ ಧಾಮ್ ಯಾತ್ರೆಯನ್ನು ಪ್ರದಕ್ಷಿಣಾಕಾರವಾಗಿ ಪೂರ್ಣಗೊಳಿಸಬೇಕು ಎಂದು ನಂಬಲಾಗಿದೆ. ಆದ್ದರಿಂದ, ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗಿ, ಗಂಗೋತ್ರಿ ಕಡೆಗೆ ಸಾಗಿ ಕೇದಾರನಾಥಕ್ಕೆ, ಮತ್ತು ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ.
12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯವು ಈ ಅಕ್ಷಯ ತೃತೀಯದಲ್ಲಿ ಭಕ್ತರಿಗಾಗಿ ತೆರೆಯುತ್ತದೆ. ಹವಾಮಾನವನ್ನು ಅವಲಂಬಿಸಿ ನವೆಂಬರ್ 3 ಅಥವಾ ಕಾರ್ತಿಕ ಹುಣ್ಣಿಮೆ ದಿನವಾದ ನವೆಂಬರ್ 15 ಅಥವಾ ಹಿಂದಿ ಭಾಷಿಕರ ಭಾಯಿ ದೂಜ್, ನವೆಂಬರ್ 20 ರಂದು ತಾತ್ಕಾಲಿಕವಾಗಿ ಮುಚ್ಚಲ್ಪಡುತ್ತದೆ.
ಪ್ರಯಾಣವನ್ನು ರಸ್ತೆ ಅಥವಾ ವಿಮಾನದ ಮೂಲಕ ಕೈಗೊಳ್ಳಲಾಗುತ್ತದೆ. ಉತ್ತರಾಖಂಡ ಪ್ರವಾಸೋದ್ಯಮ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಕೆಲವು ಭಕ್ತರು ದೋ ಧಮ್ ಯಾತ್ರೆ ಅಥವಾ ಕೇದಾರನಾಥ ಮತ್ತು ಬದರಿನಾಥ ಎಂಬ ಎರಡು ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಮಾಡುತ್ತಾರೆ.
ಚಾರ್ ಧಾಮ್ ಯಾತ್ರೆ, ಅಥವಾ ತೀರ್ಥಯಾತ್ರೆಯು ನಾಲ್ಕು ಪವಿತ್ರ ಸ್ಥಳಗಳ ಪ್ರವಾಸವಾಗಿದೆ: ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ್. ಹಿಂದಿಯಲ್ಲಿ, 'ಚಾರ್' ಎಂದರೆ ನಾಲ್ಕು ಮತ್ತು 'ಧಾಮ್' ಎಂಬುದು ಉತ್ತರಾಖಂಡ ಪ್ರವಾಸೋದ್ಯಮ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಧಾರ್ಮಿಕ ಸ್ಥಳಗಳನ್ನು ಸೂಚಿಸುತ್ತದೆ.