ಬದಿಯಡ್ಕ: ನೀರ್ಚಾಲು ಕನ್ನೆಪ್ಪಾಡಿ ಕೊಡ್ಯಮ್ಮೆ ಅಂತಲ ಶ್ರೀ ಮೊಗೇರ ಚಾವಡಿಯ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ದೈವಗಳ ಕೋಲದ ಸಾಂಸ್ಕøತಿಕ, ಸಭಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಗುರುವಾರ ರಾತ್ರಿ ಜರಗಿತು. ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪಬೆಳಗಿಸಿ ಆಶೀರ್ವಚನವನ್ನು ನೀಡಿದರು. ಅನಾದಿ ಕಾಲದಿಂದಲೂ ತುಳುನಾಡಿನ ದೈವಾರಾಧನೆಯಲ್ಲಿ ಒಂದಂಶ ಎನಿಸಿಕೊಂಡಿರುವ ಮೊಗೇರ ಜನಾಂಗವು ಕಾಲಾಂತರದಲ್ಲಿ ಕೆಲವು ಕಾರಣಗಳಿಂದ ಪಾರಂಪರಿಕ ಆರಾಧನೆಗಳು ಅದಃಪತನಕ್ಕಿಳಿದರೂ ಈಗಿನವರು ಅದರ ಚಿಂತನೆಯನ್ನು ನಡೆಸಿ ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತಿರುವುದು ಶ್ಲಾಘನೀಯ. ಮೊಗೇರ ಸಮಾಜವು ದೈವಾರಾಧನೆಯ ಅಂತಃಸತ್ವವನ್ನು ಕಾಯ್ದುಕೊಂಡು ಬರುತ್ತಿದೆ ಎಂದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಐ.ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕೊಡ್ಯಮ್ಮೆ ಅರಮನೆಯ ಶ್ರೀ ಕೃಷ್ಣರಾಜ ಬಲ್ಲಾಳರು ಉಪಸ್ಥಿತರಿದ್ದರು. ಉದ್ಯಮಿ ಬಿ.ವಸಂತ ಪೈ ಬದಿಯಡ್ಕ, ಮಲಬಾರು ದೇವಸ್ವಂಬೋರ್ಡು ಸದಸ್ಯ ಎಂ.ಶಂಕರ ರೈ ಮಾಸ್ತರ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಪೆರಡಾಲ ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ, ಅಗಲ್ಪಾಡಿ ಶಾಲಾ ಅಧ್ಯಾಪಕ ಹರಿನಾರಾಯಣ ಶಿರಂತಡ್ಕ, ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಡಿ.ದಾಮೋದರ, ನೀರ್ಚಾಲು ಮಹಾಜನ ಶಾಲಾ ಮುಖ್ಯೋಪಾಧ್ಯಾಯ ಶಿವಪ್ರಕಾಶ ಎಂ.ಕೆ., ಶ್ರೀ ಈರ್ವರು ಉಳ್ಳಾಕ್ಲು ಪರಿವಾರ ದೈವಸ್ಥಾನ ಅರಿಯಪ್ಪಾಡಿ ಮಾಡದ ಅಧ್ಯಕ್ಷ ಸೀತಾರಾಮ ಒಳಮೊಗರು ಶುಭ ಹಾರೈಸಿದರು. ಕೊಡ್ಯಮ್ಮೆ ಅಂತಲ ಶ್ರೀ ಮೊಗೇರ ಚಾವಡಿಯ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಕೆ.ಕೆ.ಸ್ವಾಮಿಕೃಪಾ ಸ್ವಾಗತಿಸಿ, ಉಪಾಧ್ಯಕ್ಷ ಎಸ್.ನಾರಾಯಣ ವಂದಿಸಿದರು. ಸುಂದರ ಕಟ್ನಡ್ಕ ಕಾರ್ಯಕ್ರಮ ನಿರೂಪಿಸಿದರು.