ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖಾಲಿ ಇರುವ ವಿವಿದ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೈಸ್ಕೂಲ್ ವಿಭಾಗದಲ್ಲಿ ಹಿಂದಿ-1, ಇಂಗ್ಲೀಷ್-2, ಸಂಸ್ಕøತ-1, ಉರ್ದು-1, ಮಲಯಾಳಂ-1, ಗಣಿತ(ಕನ್ನಡ ಮಾಧ್ಯಮ)-1, ಗಣಿತ(ಮಲಯಾಳ ಮಾಧ್ಯಮ)-2, ಫಿಸಿಕಲ್ ಸಯನ್ಸ್(ಕನ್ನಡ ಮಾಧ್ಯಮ)-1, ನ್ಯಾಚುರಲ್ ಸಯನ್ಸ್(ಕನ್ನಡ ಮಾಧ್ಯಮ)-1, ನ್ಯಾಚುರಲ್ ಸಯನ್ಸ್(ಮಲಯಾಳ ಮಾಧ್ಯಮ)-1, ಫಿಸಿಕಲ್ ಎಜುಕೇಶನ್ ಟೀಚರ್-1, ಡ್ರಾಯಿಂಗ್ ಟೀಚರ್-1, ಯುಪಿ ವಿಭಾಗದಲ್ಲಿ ಜೂನಿಯರ್ ಲ್ಯಾಂಗ್ವೇಜ್ ಟೀಚರ್ ಅರೆಬಿಕ್-1, ಹಿಂದಿ-1, ಕನ್ನಡ-2, ಮಲಯಾಳ-1, ಎಲ್ ಪಿ ವಿಭಾಗದಲ್ಲಿ ಮಲಯಾಳ-1, ಅರೆಬಿಕ್-2, ಪ್ರಿ ಫ್ರೈಮರಿ ಟೀಚರ್ ಕನ್ನಡ-1 ಮತ್ತು ಮಲಯಾಳ-1 ಶಿಕ್ಷಕ ಹುದ್ದೆ ಖಾಲಿ ಹುದ್ದೆಗಳಿಗೆ ಅರ್ಹ ಉದ್ಯೋಗಾರ್ಥಿಗಳು ಮೇ.29 ಬುಧವಾರ ಪೂರ್ವಾಹ್ನ 9.30ಕ್ಕೆ ಅಸಲಿ ಪ್ರಮಾಣಪತ್ರಗಳೊಂದಿಗೆ ಶಾಲಾ ಕಛೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ವಿವರಗಳಿಗೆ 9995992949 ಎಂಬ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
……………………………………………………………………………………………………………
ಮುಳ್ಳೇರಿಯದಲ್ಲಿ ಅಧ್ಯಾಪಕ ಹುದ್ದೆಗೆ ಸಂದರ್ಶನ
ಮುಳ್ಳೇರಿಯ: ಜಿ ವಿ ಎಚ್ ಎಸ್ ಎಸ್ ಮುಳ್ಳೇರಿಯ ಶಾಲೆಯ ಪ್ರೌಢ ವಿಭಾಗದಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ( ಮಲಯಾಳ ಮಾಧ್ಯಮ) ಸಮಾಜ ವಿಜ್ಞಾನ (ಮಲಯಾಳ ಮಾಧ್ಯಮ) ಜೀವಶಾಸ್ತ್ರ, (ಮಲಯಾಳ ಮಾಧ್ಯಮ), ಇಂಗ್ಲೀಷ್, ಸಂಸ್ಕøತ -(ಅರೆಕಾಲಿಕ) ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಯನ್ನು ನಡೆಸಲಾಗುತ್ತದೆ. ಆಸಕ್ತ ಯೋಗ್ಯ ಅಭ್ಯರ್ಥಿಗಳು ಮೇ 29 ರಂದು ಬೆಳಗ್ಗೆ 11 ರಿಂದ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ ದೂರವಾಣಿ 04994261846 ಸಂಪರ್ಕಿಸಬಹುದು.
……………………………………………………………………………………………………………
ಉಪ್ಪಳದಲ್ಲಿ ಅಧ್ಯಾಪಕ ಹುದ್ದೆಗೆ ಸಂದರ್ಶನ
ಉಪ್ಪಳ: ಉಪ್ಪಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಇಂಗ್ಲಿಷ್, ರಾಜ್ಯಶಾಸ್ತ್ರ, ಸ್ಟಾಟಿಸ್ಟಿಕ್ಸ್ (ಸೀನಿಯರ್), ಸ್ಟಾಟಿಸ್ಟಿಕ್ಸ್ (ಜೂನಿಯರ್) ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಯೋಗ್ಯರಾದ ಆಸಕ್ತ ಅಭ್ಯರ್ಥಿಗಳು ಮೇ 30 ರಂದು ಬೆಳಗ್ಗೆ 11 ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗೆ ದೂರವಾಣಿ: 9446069678 ಸಂಖ್ಯೆ ಸಂಪರ್ಕಿಸಬಹುದು.
……………………………………………………………………………………………………………
ಅಂಗಡಿಮೊಗರು ಶಾಲೆಯಲ್ಲಿ ಅಧ್ಯಾಪಕ ಹುದ್ದೆಗೆ ಸಂದರ್ಶನ
ಕುಂಬಳೆ: ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಎಚ್.ಎಸ್.ಟಿ.ಫಿಸಿಕಲ್ ಸೈನ್ಸ್ (ಮಲಯಾಳಂ),ಎಚ್.ಎಸ್.ಟಿ.ಫಿಸಿಕಲ್ ಸೈನ್ಸ್ (ಕನ್ನಡ), ಎಚ್.ಎಸ್.ಟಿ. ಗಣಿತ (ಮಲಯಾಳಂ), ಎಚ್.ಎಸ್.ಟಿ. ಹಿಂದಿ, ದೈಹಿಕ ಶಿಕ್ಷಣ, ಯುಪಿಎಸ್.ಟಿ. ಅರೇಬಿಕ್ ಹುದ್ದೆಗಳಿಗೆ ದಿನವೇತನದ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಮೇ 28 ರಂದು ಬೆಳಿಗ್ಗೆ 10 ಕ್ಕೆ ಶಾಲೆಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಮಾಹಿತಿಗೆ ದೂರವಾಣಿ- 62825 25600 ಸಂಪರ್ಕಿಸಬಹುದು.