ತನ್ನ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳ ದಾಖಲೆಗಳಿರುವ ಫಾರಂ 17 ಸಿಯ ಪ್ರತಿಗಳನ್ನು ತನಗೆ ಒದಗಿಸಲಿಲ್ಲವೆಂದು ಉತ್ತರಪ್ರದೇಶದ ರಾಂಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನ್ಯಾಯವಾದಿ ಮೆಹಮೂದ್ ಪ್ರಾಚಾ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆಂದು 'ಲೈವ್ ಲಾ' ವರದಿ ಮಾಡಿದೆ.
ತನ್ನ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳ ದಾಖಲೆಗಳಿರುವ ಫಾರಂ 17 ಸಿಯ ಪ್ರತಿಗಳನ್ನು ತನಗೆ ಒದಗಿಸಲಿಲ್ಲವೆಂದು ಉತ್ತರಪ್ರದೇಶದ ರಾಂಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನ್ಯಾಯವಾದಿ ಮೆಹಮೂದ್ ಪ್ರಾಚಾ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆಂದು 'ಲೈವ್ ಲಾ' ವರದಿ ಮಾಡಿದೆ.
ಮತದಾನದ ಪ್ರಮಾಣದ ಕುರಿತ ಸಂಪೂರ್ಣ ವಿವರಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಎನ್ ಜಿ ಓ ಸಂಸ್ಥೆ 'ಪ್ರಜಾತಾಂತ್ರಿಕ ಸುಧಾರಣೆಗಳ ಸಂಘ' (ಎಡಿಆರ್) ಸಲ್ಲಿಸಿದ ಅರ್ಜಿಗೆ ಪೂರಕವಾಗಿ ಮಧ್ಯಪ್ರವೇಶ ಅರ್ಜಿಯನ್ನು ಪ್ರಾಚಾ ಅವರು ಸಲ್ಲಿಸಿದ್ದಾರೆ.
ಚಲಾವಣೆಯಾದ ಒಟ್ಟು ಮತಗಳ ಮತಯಂತ್ರವಾರು ದತ್ತಾಂಶಗಳನ್ನು ಪ್ರಕಟಿಸಬೇಕೆಂದು ಕೋರಿ ಎಪ್ರಿಲ್ 30ರಂದು ಮತದಾನ ನಿರ್ವಹಣಾಧಿಕಾರಿಯವರಿಗೆ ಪ್ರಾಚಾ ಪತ್ರ ಬರೆದಿದ್ದಾರೆ. ಎಪ್ರಿಲ್ 19ರಂದು ರಾಂಪುರ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ಮತದಾನದ ಅಂಕಿಅಂಶಗಳನ್ನು ಒಳಗೊಂಡ 17 ಸಿ ಫಾರಂಗಳನ್ನು ಮೊಹರು ಮಾಡಿರುವುದರಿಂದ ರಾಂಪುರದ ಮತಗಟ್ಟೆಗಳ ಮತದಾನ ವಿವರಗಳನ್ನು ನೀಡಲು ಸಾಧ್ಯವಿಲ್ಲವೆಂದು ಚುನಾವಣಾಧಿಕಾರಿಯವರು ಪ್ರಾಚಾ ಅವರಿಗೆ ಉತ್ತರಿಸಿದ್ದರು.
ಇದಕ್ಕೆ ಪ್ರತಿಯಾಗಿ ಮತ್ತೊಮ್ಮೆ ಪತ್ರ ಬರೆದ ಪ್ರಾಚಾ ಅವರು, ಫಾರಂ ಸಿ ಅನ್ನು ಚುನಾವಣಾ ನಿರ್ವಹಣಾಧಿಕಾರಿಯ ವಶದಲ್ಲಿ ಇರಿಸಬೇಕಾಗಿದೆ ಹಾಗೂ ಒಂದು ವೇಳೆ ಅಭ್ಯರ್ಥಿಗಳು ಕೋರಿದಲ್ಲಿ ಅಧಿಕಾರಿಯವರು ಫಾರಂ 17ಸಿಯ ಪ್ರತಿಗಳನ್ನು ಅವರಿಗೆ ಪೂರೈಸಬೇಕಾದ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದರು.
ಮತದಾನದ ಬಳಿಕ ಮೊಹರು ಮಾಡುವ ದಾಖಲೆಗಳಲ್ಲಿ ಫಾರಂ 17 ಸಿ ಒಳಗೊಂಡಿಲ್ಲವೆಂದು 1961ರ ಚುನಾವಣಾ ನಿರ್ವಹಣಾ ಕಾನೂನುಗಳ 93ನೇ ನಿಯಮವನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಪ್ರಜಾತಾಂತ್ರಿಕ ಸುಧಾರಣೆಗಳ ಸಂಘವು ಪ್ರಕಟಿಸಿದ ನಿಯಮದ ಭಾಗವಾಗಿ ಸುಪ್ರೀಂಕೋರ್ಟ್ ಮೇ 17ರಂದು ಪ್ರಕಟಿಸಿದ ನಿಯಮವೊಂದರಲ್ಲಿ ಹಾಲಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾವಣೆಯ ಸಂಪೂರ್ಣ ಅಂಕಿ ಅಂಶಗಳನ್ನು ಪ್ರತಿಯೊಂದು ಹಂತದ ಮತದಾನದ ಬಳಿಕ ತಕ್ಷಣವೇ ಪ್ರಕಟಿಸಬೇಕೆಂದು ನ್ಯಾಯಾಲಯವು ನಿರ್ದೇಶನ ನೀಡಿತ್ತು.