ಢಾಕಾ: ಬಾಂಗ್ಲಾದೇಶದ ಗಡಿಯಲ್ಲಿ ಹರಿಯುವ ತೀಸ್ತಾ ನದಿಗೆ ಜಲಾಶಯ ನಿರ್ಮಿಸುವ ಯೋಜನೆಗೆ ಭಾರತ ಬೆಂಬಲ ವ್ಯಕ್ತಪಡಿಸಿದೆ ಎಂದು ಬಾಂಗ್ಲಾದ ವಿದೇಶಾಂಗ ಸಚಿವ ಹಸನ್ ಮಹಮೂದ್ ಗುರುವಾರ ತಿಳಿಸಿದರು.
ಢಾಕಾ: ಬಾಂಗ್ಲಾದೇಶದ ಗಡಿಯಲ್ಲಿ ಹರಿಯುವ ತೀಸ್ತಾ ನದಿಗೆ ಜಲಾಶಯ ನಿರ್ಮಿಸುವ ಯೋಜನೆಗೆ ಭಾರತ ಬೆಂಬಲ ವ್ಯಕ್ತಪಡಿಸಿದೆ ಎಂದು ಬಾಂಗ್ಲಾದ ವಿದೇಶಾಂಗ ಸಚಿವ ಹಸನ್ ಮಹಮೂದ್ ಗುರುವಾರ ತಿಳಿಸಿದರು.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು ಬಾಂಗ್ಲಾದ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ ಬಳಿಕ ಅವರು ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತೀಸ್ತಾ ನದಿ ನೀರಿನ ಹಂಚಿಕೆಯು ನವದೆಹಲಿ ಮತ್ತು ಢಾಕಾ ನಡುವೆ ವಿವಾದಾತ್ಮಕ ವಿಷಯವಾಗಿ ಉಳಿದಿದೆ. ಇಲ್ಲಿ ಜಲಾಶಯ ನಿರ್ಮಿಸುವ ಯೋಜನೆ ಕೈಗೊಳ್ಳಲು ಬಾಂಗ್ಲಾ ಮುಂದಾಗಿದ್ದು, ಅದಕ್ಕೆ ಬೀಜಿಂಗ್ ತಕ್ಷಣವೇ ತನ್ನ ಬೆಂಬಲ ವ್ಯಕ್ತಪಡಿಸಿತ್ತು.
'ನಮ್ಮ ತೀಸ್ತಾ ಯೋಜನೆಗೆ ಭಾರತವು ಹಣಕಾಸು ನೀಡಲು ಬಯಸುತ್ತಿದೆ. ಯೋಜನೆಯು ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಇರಬೇಕು ಮತ್ತು ನಮ್ಮ ಅಗತ್ಯಗಳನ್ನು ಪೂರೈಸಬೇಕು ಎಂದು ನಾವು ಹೇಳಿದ್ದೇವೆ' ಎಂದು ಸಚಿವರು ತಿಳಿಸಿದರು. ಆದರೆ ಭಾರತದ ಪ್ರಸ್ತಾವನೆ ಕುರಿತು ಸಚಿವರು ಹೆಚ್ಚಿನ ವಿವರ ನೀಡಲಿಲ್ಲ.
ಇದಕ್ಕೂ ಮುನ್ನಾ ಕ್ವಾತ್ರಾ ಅವರು ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಹಸೀನಾ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಕ್ವಾತ್ರಾ ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.