ರಾಯಬರೇಲಿ: ನಾಮಪತ್ರ ಸಲ್ಲಿಕೆ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ರಾಹುಲ್ ಗಾಂಧಿಗೆ ಒಂದು ಪ್ರಶ್ನೆ ಎದುರಾಗಿತ್ತು. ಯಾವಾಗ ಮದುವೆ ಆಗ್ತೀರಾ? ಎಂದು ಜನರ ಗುಂಪಿನಿಂದ ಪ್ರಶ್ನೆ ತೇಲಿಬಂದಿದೆ.
ರ್‍ಯಾಲಿ ವೇಳೆ ಪ್ರಿಯಾಂಕಾ ಅವರನ್ನು ವೇದಿಕೆಗೆ ಕರೆದ ರಾಹುಲ್, ಹೆಗಲ ಮೇಲೆ ಕೈಇಟ್ಟು ರಾಯಬರೇಲಿಯಲ್ಲಿ ಪ್ರಚಾರ ಸಂಘಟಿಸಿದ್ದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
'ನಾನು ದೇಶದ ವಿವಿಧ ಭಾಗಗಳಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಕೈಗೊಂಡಿದ್ದೆ. ಪ್ರಿಯಾಂಕಾ ಇಲ್ಲೇ ಇದ್ದು, ಪ್ರಚಾರದ ಕೆಲಸ ನೋಡಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ದೊಡ್ಡ ಧನ್ಯವಾದ'ಎಂದು ರಾಹುಲ್ ಹೊಗಳಿದರು.
ಈ ವೇಳೆ, 'ಶಾದಿ ಕಬ್ ಕರೋಗೆ'(ಯಾವಾಗ ಮದುವೆ ಆಗ್ತೀರಿ) ಎಂಬ ಪ್ರಶ್ನೆ ಜನರ ಗುಂಪಿನಿಂದ ತೇಲಿಬಂದಿತು. ರಾಹುಲ್ ಬಳಿಯೇ ಇದ್ದ ಪ್ರಿಯಾಂಕಾ ಗಾಂಧಿ, ಜನರ ಗುಂಪಿನಿಂದ ಪ್ರಶ್ನೆ ಬರುತ್ತಿದೆ. ಅದಕ್ಕೆ ಉತ್ತರಿಸಿ ಎಂದರು.
ಬಳಿಕ, 54 ವರ್ಷದ ರಾಹುಲ್ ಗಾಂಧಿ, ಆದಷ್ಟು ಬೇಗ ಆಗಲಿದೆ ಎಂದು ಉತ್ತರಿಸಿದ್ದಾರೆ.