ಮಾಲೆ: ಭಾರತ ಸೇನೆಯ ಹೆಲಿಕಾಪ್ಟರ್ ಪೈಲಟ್‌ಗಳು ಮಾಲ್ದೀವ್ಸ್‌ನಲ್ಲಿಯೇ ನೆಲೆಯೂರಿದ್ದು, 2019ರಿಂದಲೂ ಅನಧಿಕೃತವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾಲ್ದೀವ್ಸ್ ರಕ್ಷಣಾ ಸಚಿವರ ಹೇಳಿಕೆಯನ್ನು ಭಾರತ ಮಂಗಳವಾರ ತಲ್ಳಿಹಾಕಿದೆ.
ಮಾಲೆ: ಭಾರತ ಸೇನೆಯ ಹೆಲಿಕಾಪ್ಟರ್ ಪೈಲಟ್‌ಗಳು ಮಾಲ್ದೀವ್ಸ್‌ನಲ್ಲಿಯೇ ನೆಲೆಯೂರಿದ್ದು, 2019ರಿಂದಲೂ ಅನಧಿಕೃತವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾಲ್ದೀವ್ಸ್ ರಕ್ಷಣಾ ಸಚಿವರ ಹೇಳಿಕೆಯನ್ನು ಭಾರತ ಮಂಗಳವಾರ ತಲ್ಳಿಹಾಕಿದೆ.
ಈ ಕುರಿತು ಹೇಳಿಕೆ ನೀಡಿರುವ ಭಾರತದ ರಾಯಭಾರ ಕಚೇರಿಯು ಮಾಲ್ದೀವ್ಸ್‌ನಲ್ಲಿ ಭಾರತೀಯ ವೈಮಾನಿಕ ಸಿಬ್ಬಂದಿಯು ಎಂದಿಗೂ ಅಗತ್ಯ ಅನುಮತಿಯೊಂದಿಗೆ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ತಿಳಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಕ್ಷಣಾ ಸಚಿವ ಘಸ್ಶಾನ್ ಅವರು, ದೇಶದಲ್ಲಿ ಅನಧಿಕೃತ ಕಾರ್ಯಾಚರಣೆ ನಡೆಯುತ್ತಿರುವ ಕುರಿತು ತಮಗೆ ಮಾಹಿತಿ ಇದೆ ಎಂದು ತಿಳಿಸಿದ್ದರು. ತಿಮರಾಫುಶಿಯಲ್ಲಿ ಅನುಮತಿಯಿಲ್ಲದೇ ಹೆಲಿಕಾಪ್ಟರ್ ಇಳಿದಿತ್ತು ಎಂಬುದನ್ನು ಉಲ್ಲೇಖಿಸಿದ್ದರು.
ಈ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ. ಮಾಲ್ದೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಯ (ಎಂಎನ್‌ಡಿಎಫ್) ಅನುಮೋದನೆಯೊಂದಿಗೆ ಅಗತ್ಯ ಕಾರ್ಯಾಚರಣೆ ನಡೆಸಲಿದೆ ಎಂದು ರಾಯಭಾರ ಕಚೇರಿಯು ತಿಳಿಸಿದೆ. ಸಚಿವರು ಸುದ್ದಿಗೋಷ್ಠಿಯಲ್ಲಿ ಉಲ್ಲೇಖಿಸಿದ್ದ ಹೆಲಿಕಾಪ್ಟರ್ ಕೂಡಾ ಪೂರ್ನ ಅನುಮೋದನೆಯೊಂದಿಗೆ ಕಾರ್ಯಾಚರಣೆ ನಡೆಸಿತ್ತು ಎಂದು ಸ್ಪಷ್ಟಪಡಿಸಿದೆ.