ಕಾಸರಗೋಡು: ಪ್ರಜಾಸತ್ತಾತ್ಮಕ ಹೋರಾಟಗಳ ಬಗ್ಗೆ ಗಮನಹರಿಸದೆ, ಇದರಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅರ್ಹತೆಯಿಲ್ಲ ಎಂಬುದಾಗಿ ಖ್ಯಾತ ಸಾಮಾಝಿಕ ಹೋರಾಟಗಾರ ಟಿ.ಪಿ. ಪದ್ಮನಾಭನ್ ತಿಳಿಸಿದ್ದಾರೆ.
ಅವರು ಎಂಡೋಸಲ್ಫಾನ್ ಸಂತ್ರಸ್ತರು ಕಳೆದ ನಾಲ್ಕು ತಿಂಗಳಿಂದ ಕಾಞಂಗಾಡಿನಲ್ಲಿ ನಡೆಸಿಕೊಂಡು ಬರುತ್ತಿರುವ ಧರಣಿ ಉದ್ದೇಶಿಸಿ ಮಾತನಾಡಿದರು.
ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ತಾಯಂದಿರು ತಮ್ಮ ನ್ಯಾಐಯುತ ಬೇಡಿಕೆ ಈಡೇರಿಸುವಂತೆ ಕಳೆದ ನಾಲ್ಕು ತಿಂಗಳಿಂದ ನಡೆಸಿಕೊಂಡು ಬರುತ್ತಿರುವ ಧರಣಿಯನ್ನು ಕಂಡೂಕಾಣದಂತೆ ವರ್ತಿಸುತ್ತಿರುವ ಸರ್ಕಾರದ ಕುರುಡು ನೀಡಿ, ತಾಯಂದಿರ ಕಣ್ಣೀರ ಹೋರಾಟದ ಬಗ್ಗೆ ಗಮನಹರಿಸದ ಸರ್ಕಾರ ಅವರೊಂದಿಗೆ ಮಾತುಕತೆಗೂ ಸಿದ್ಧವಾಗದಿರುವುದು ಎಂಡೋಸಲ್ಫಾನ್ ಸಂತ್ರಸ್ತರಲ್ಲಿ ತೋರುವ ನಿರ್ಲಕ್ಷ್ಯ ಧೋರಣೆಯಾಗಿದೆ. ಸಂತ್ರಸ್ತರ ತಾಳ್ಮೆ ಪರೀಕ್ಷೆ ನಡೆಸುವುದನ್ನು ಕೈಬಿಟ್ಟು, ಸರ್ಕಾರ ಮಾತುಕತೆಗೆ ಮುಂದಾಗಬೇಕು ಹಾಗೂ ಸಂತ್ರಸ್ತರ ನ್ಯಾಯಯುತ ಬೇಯೀಡೇರಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
ಕೆ. ಇ. ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ಸುಸ್ಮಿತಾಚಂದ್ರನ್, ಪಿಪಿ ರಾಜನ್, ಅತ್ತಾಯಿ ಬಾಲನ್, ಸಿ. ದಿವಾಕರನ್, ಹರಿದಾಸನ್, ರಾಮಕೃಷ್ಣನ್ ಮೋನಚಾ ುಪಸ್ಥಿತರಿದ್ದರು. ಅಂಬಲತ್ತರ ಕುಞÂಕೃಷ್ಣನ್ ಸ್ವಾಗತಿಸಿದರು. ಪಿ. ಶೈನಿ ವಂದಿಸಿದರು.