ನವದೆಹಲಿ: ಜೂನ್ 10ರಿಂದ ಜಾರಿಗೆ ಬರುವಂತೆ ಸಂಜಯ್ ಶರ್ಮಾ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ನೇಮಕ ಮಾಡುವುದಾಗಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತಿಳಿಸಿದೆ.
ನವದೆಹಲಿ: ಜೂನ್ 10ರಿಂದ ಜಾರಿಗೆ ಬರುವಂತೆ ಸಂಜಯ್ ಶರ್ಮಾ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ನೇಮಕ ಮಾಡುವುದಾಗಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ವಿನೋದ್ ಹೆಜ್ಮಾಡಿ ಅವರ ಸ್ಥಾನಕ್ಕೆ ಶರ್ಮಾ ಬರಲಿದ್ದಾರೆ.
ಕಾರ್ಪೊರೇಟ್ ಹಣಕಾಸು, ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ಶರ್ಮಾ ಮೂರು ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿದ್ದಾರೆ.
ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ನಲ್ಲಿ ಸಿಎಫ್‌ಒ ಆಗಿದ್ದ ಶರ್ಮಾ ಅವರು ಇದಕ್ಕೂ ಮೊದಲು ಅವರು ಟಾಟಾ ರಿಯಾಲ್ಟಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಲ್ಲಿ ಸಿಎಫ್‌ಒ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಡಾಯ್ಚ ಬ್ಯಾಂಕ್ ಗ್ರೂಪ್‌ನಲ್ಲಿ ಇಕ್ವಿಟಿ ಕ್ಯಾಪಿಟಲ್ ಮಾರ್ಕೆಟ್ಸ್ ಮುಖ್ಯಸ್ಥರಾಗಿ, ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.