ನವದೆಹಲಿ: ಇರಾನ್ ಮೂಲದ ವ್ಯಕ್ತಿಗೆ ಸೇರಿದ ಹಡಗು ಮತ್ತು ಅದರಲ್ಲಿದ್ದ ಭಾರತ ಮೂಲದ ಆರು ಮಂದಿ ನಾವಿಕರನ್ನು ಕೇರಳದ ಕರಾವಳಿ ಭಾಗದಲ್ಲಿ ಭಾನುವಾರ ವಶಕ್ಕೆ ಪಡೆಯಲಾಗಿದೆ ಎಂದು ಭಾರತೀಯ ಕರಾವಳಿ ಪಡೆ (ಐಸಿಜಿ) ಸೋಮವಾರ ತಿಳಿಸಿದೆ.
ಈ ಹಡಗು ಇರಾನ್ ಉದ್ಯಮಿಯೊಬ್ಬರಿಗೆ ಸೇರಿದಾಗಿದ್ದು, ತಮಿಳುನಾಡು ಮೂಲದ ಮೀನುಗಾರರಿಗೆ ಗುತ್ತಿಗೆ ನೀಡಿದ್ದರು.
ಆದರೆ, ಈ ಮೀನುಗಾರರಿಗೆ ಅಗತ್ಯ ಸೌಕರ್ಯಗಳನ್ನು ನಿರಾಕರಿಸಲಾಗಿತ್ತು. ಜೊತೆಗೆ ಅವರ ಪಾಸ್‌ಪೋರ್ಟ್ ಅನ್ನು ತಮ್ಮ ಸ್ವಾಧೀನ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅದೇ ಹಡಗಿನಲ್ಲಿ ಇರಾನ್‌ನಿಂದ ತಾಯ್ನಾಡು ಭಾರತ ತಲುಪಲು ಮೀನುಗಾರರು ಬರುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿದುಬಂದಿದೆ.ಮತ್ತಷ್ಟು ವಿಚಾರಣೆಗಾಗಿ ಹಡಗನ್ನು ಕೇರಳದ ಕೊಚ್ಚಿಗೆ ತರಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.