ತಿರುವನಂತಪುರಂ: ಕೆಎಸ್‍ಆರ್‍ಟಿಸಿಯ ಮೊದಲ ಡ್ರೈವಿಂಗ್ ಸ್ಕೂಲ್ ನ್ನು ತಿರುವನಂತಪುರದಲ್ಲಿ ಆರಂಭಿಸಲಾಗುವುದು ಎಂದು ಸಚಿವ ಗಣೇಶ್ ಕುಮಾರ್ ಹೇಳಿದ್ದಾರೆ.
ಮುಂದಿನ ಆರು ತಿಂಗಳೊಳಗೆ ಆರಂಭಿಸಲು ಸಾಧ್ಯವಾಗುವ ಭರವಸೆ ಇದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಚಾಲನಾ ಪರೀಕ್ಷೆ ಸುಧಾರಣೆಗೆ ಇನ್ನು ಮುಂದೆ ಯಾವುದೇ ರಾಜಿ ಇಲ್ಲ ಎಂದು ಗಣೇಶ್ ಕುಮಾರ್ ಹೇಳಿದರು. ಪ್ರತಿಭಟನಾಕಾರರ ಜತೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಅದನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.
ಪರೀಕ್ಷೆಗೆ ಬೋಧಕರು ಕಡ್ಡಾಯ. ಡ್ರೈವಿಂಗ್ ಸ್ಕೂಲ್‍ಗಳಲ್ಲಿ ಬೋಧಕರ ಕೊರತೆಯ ಪರಿಸ್ಥಿತಿಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗಣೇಶ್ ಕುಮಾರ್ ಹೇಳಿದರು.