ಕಾಸರಗೋಡು: ಮತೀಯ ಸಾಮರಸ್ಯಕ್ಕೆ ಧಕ್ಕೆ ತಂದೊಡ್ಡುವ ರೀತಿಯಲ್ಲಿ ವಾಟ್ಸಪ್ ಗ್ರೂಪ್‍ಗಳ ಮೂಲಕ ಸುಳ್ಳು ಸುದ್ದಿ ಪ್ರಚಾರ ನಡೆಸಿದ ಕುಂಬಳೆಯ ಚೌಕಿ ಕುನ್ನಿಲ್ ನಿವಾಸಿ ಮಹಮ್ಮದ್ ರಫೀಕ್ ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಕೋಯಿಕ್ಕೋಡ್ ಕರಿಪ್ಪೂರ್ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ.
2023 ಜುಲೈ 28ರಂದು ಆರೋಪಿ ಮಹಮ್ಮದ್ ರಫೀಕ್ ವಿದೇಶದಲ್ಲಿದ್ದುಕೊಂಡು, ಕುಂಬಳೆಯ ವಾಟ್ಸ್‍ಅಪ್ ಗ್ರೂಪ್ ಒಂದರಲ್ಲಿ ಕೋಮುಸಮರಸ್ಯಕ್ಕೆ ದಕ್ಕೆ ತಂದೊಡ್ಡುವ ರೀತಿಯ ಸುಳ್ಳು ಸಂದೇಶ ರವಾನಿಸಿದ್ದನು. ಪೊಲೀಸರು ಈ ಬಗ್ಗೆ ಸ್ವ ಇಚ್ಛೆಯಿಂದ ಕೇಸು ದಾಖಲಿಸಿಕೊಂಡಿದ್ದು, ತನಿಖೆಯಿಂದ ಆರೋಪಿ ವಿದೇಶದಲ್ಲಿರುವುದಾಗಿ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಲುಕೌಟ್ ನೋಟೀಸು ಜಾರಿಗೊಳಿಸಲಾಗಿತ್ತು. ಈ ಮಧ್ಯೆ ಆರೋಪಿ ಶುಕ್ರವಾರ ರಾತ್ರಿ ವಿದೇಶದಿಂದ ಕರಿಪ್ಪುರ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿಮಾನ ನಿಲ್ದಾಣ ಅಧಿಕಾರಿಗಳ ಸಹಕಾರದಿಂದ ವಶಕ್ಕೆ ತೆಗೆದುಕೊಂಡಿದ್ದರು.