ಕೊಚ್ಚಿ: ಅಮೃತ ಆಸ್ಪತ್ರೆಯ ಹೃದ್ರೋಗ ವಿಭಾಗದ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ವೈದ್ಯರಿಗೆ ಹೃದ್ರೋಗ ಚಿಕಿತ್ಸೆಗೆ ಸಂಬಂಧಿಸಿದ ಚರ್ಚೆ ಹಾಗೂ ತರಗತಿಗಳನ್ನು ಆಯೋಜಿಸಲಾಗಿತ್ತು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕೊಚ್ಚಿ ಮತ್ತು ಎಡಪಳ್ಳಿ ಘಟಕಗಳ ಸಹಯೋಗದಲ್ಲಿ ಕಾಲೂರ್ ಐಎಂಎ ಹೌಸ್‍ನಲ್ಲಿ ನಡೆದ ಅಮೃತ ಹೃದ್ರೋಗ ಶಾಸ್ತ್ರದ ಶಿಬಿರದಲ್ಲಿ ಎರ್ನಾಕುಳಂ, ಆಲಪ್ಪುಳ ಮತ್ತು ಇಡುಕ್ಕಿ ಜಿಲ್ಲೆಗಳಿಂದ 200 ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.
ಅಮೃತ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ರಾಜೇಶ ತಚತೋಡಿ, ಡಾ. ಕೆ.ಯು. ನಟರಾಜನ್, ಡಾ. ಪ್ರವೀಣ್ ಜಿ. ಪೈ, ಡಾ. ಎಂ ವಿಜಯಕುಮಾರ್, ಡಾ. ಸರಿತಾ ಶೇಖರ್, ಡಾ. ಹಿಶಾಮ್ ಅಹಮದ್, ಡಾ. ನವೀನ್ ಮ್ಯಾಥ್ಯೂ, ಡಾ. ಎಂ.ಎಸ್. ಹರಿಕೃಷ್ಣನ್ ಮತ್ತಿತರರು ತರಗತಿಗಳನ್ನು ನಡೆಸಿದರು. ಹೃದ್ರೋಗಗಳು, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ವೈದ್ಯರ ಸಂದೇಹಗಳಿಗೆ ತಜ್ಞರು ಉತ್ತರಿಸಿದರು.