ತಿರುವನಂತಪುರಂ: ಜಿಲ್ಲಾಧಿಕಾರಿ ಜೆರೊಮಿಕ್ ಜಾರ್ಜ್ ವಿರುದ್ಧ ಸರ್ಕಾರಿ ವೈದ್ಯರು ದೂರು ದಾಖಲಿಸಿದ್ದಾರೆ. ಉಗುರು ಸುತ್ತು ಚಿಕಿತ್ಸೆಗೆಂದು ವೈದ್ಯರನ್ನು ಮನೆಗೆ ಕರೆಸಿಕೊಳ್ಳಲಾಗಿದ್ದು, ಕರ್ತವ್ಯದ ವೇಳೆ ಜಿಲ್ಲಾಧಿಕಾರಿ ಮನೆಗೆ ತೆರಳಿ ಚಿಕಿತ್ಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಜೆರೊಮಿಕ್ ಜಾರ್ಜ್ ಅಧಿಕಾರ ದುರುಪಯೋಗ ಎಸಗಿರುವುದನ್ನು ಎತ್ತಿ ತೋರಿಸಲು ಕೆಜಿಎಂಒಎ ಮುಂದಾಗಿದೆ. ಇಂತಹ ಘಟನೆಗಳು ಮರುಕಳಿಸಿದರೆ ಮುಷ್ಕರ ನಡೆಸುವುದಾಗಿ ಕೆಜಿಎಂಒಎ ತಿಳಿಸಿದೆ.
ನಿನ್ನೆ ಜಿಲ್ಲಾಧಿಕಾರಿ ಡಿಎಂಒಗೆ ಕರೆ ಮಾಡಿ ವೈದ್ಯರಲ್ಲಿ ಒಬ್ಬರನ್ನು ಚಿಕಿತ್ಸೆಗೆ ಕಳಿಸುವಂತೆ ಕೋರಿದ್ದರು. ಸರ್ಕಾರಿ ವೈದ್ಯರನ್ನು ಖಾಸಗಿ ಉದ್ದೇಶಕ್ಕೆ ಬಿಡುಗಡೆ ಮಾಡುವಂತಿಲ್ಲ ಎಂದು ಡಿಎಂಒ ತಿಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಮತ್ತೊಮ್ಮೆ ಕರೆ ಮಾಡಿ ಒತ್ತಾಯಿಸಿದಾಗ ವೈದ್ಯರನ್ನು ಕಳಿಸುವಂತೆ ಡಿಎಂಒ ನಿರ್ವಾಹವಿಲ್ಲದೆ ಕಳಿಸಿದರು. ಜಿಲ್ಲಾಧಿಕಾರಿ ಮನೆಗೆ ವೈದ್ಯರು ಬಂದಾಗ ರಿಂಗ್ ವರ್ಮ್ ಗೆ ಚಿಕಿತ್ಸೆ ಪಡೆದಿರುವುದು ಸ್ಪಷ್ಟ್ಟವಾಯಿತು. 20 ನಿಮಿಷ ಕಾಯಬೇಕಾಯಿತು ಎಂದು ವೈದ್ಯರು ಹೇಳಿದ್ದಾರೆ.
ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ಕೆ.ಜಿ.ಎಂ.ಒ.ಎ ಅಧ್ಯಕ್ಷ ಪದ್ಮ ಪ್ರಸಾದ್ ಮಾತನಾಡಿ, ಪೆರುರ್ಕಡ ಮಾದರಿ ಆಸ್ಪತ್ರೆಯಿಂದ ಸÀರ್ಕಾರಿ ವೈದ್ಯರನ್ನು ಡಿಸಿ ಜೆರೊಮಿಕ್ ಜಾರ್ಜ್ ಕರೆಸಿ ಸಣ್ಣಪುಟ್ಟ ಕಾಯಿಲೆಗೆ ಚಿಕಿತ್ಸೆ ಕೊಡಿಸಲಾಗಿದೆ. ಇದೇ ರೀತಿ ಮುಂದುವರಿದರೆ ಮುಷ್ಕರ ನಡೆಸುವುದಾಗಿ ವೈದ್ಯರ ಸಂಘವೂ ಹೇಳಿದೆ.