ಕಾಸರಗೋಡು: ವಾಹನ ಕಳವು ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿರುವ ಪಳ್ಳಿಕೆರೆ ಪಾಕಂ ಚೇರ್ಕಪ್ಪಾರ ನಿವಾಸಿ ಇಬ್ರಾಹಿಂ ಬಾದುಷಾ ಎಂಬಾತನನ್ನು ಕಣ್ಣೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ರಐಲ್ವೆ ನಿಲ್ದಾಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲವೊಂದು ಕಳವು ಪ್ರಕರಣಗಳಲ್ಲಿ ಹಾಗೂ ಕಾಞಂಗಾಡು ಠಾಣೆಯಲ್ಲಿ ವಾರಂಟ್ ಆರೋಪಿಯಾಗಿರುವುದಾಗಿ ಮಾಹಿತಿ ಲಭಿಸಿತ್ತು. ಈ ನಿಟ್ಟಿನಲ್ಲಿ ಆರೋಪಿಯನ್ನು ಕಾಞಂಗಾಡು ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಪಾದಚಾರಿ ಮಹಿಳೆಯರ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿಯಾಗಿರುವ ಹಲವು ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಬಂದಡ್ಕ ಪಡ್ಪು ಸನಿಹದ ಆಯುರ್ವೇದ ಔಷಧದ ಅಂಗಡಿಗೆ ನುಗ್ಗಿ ಮಾಲಕಿ ಕತ್ತಿನಿಂದ, ಮಡಿಕೈ ಚರುದಕಿಣರ್ ಎಂಬಲ್ಲಿ ವ್ಯಾಪಾರಿಯೊಬ್ಬರ ಪತ್ನಿ ಕತ್ತಿನಿಂದ, ಬೇಡಡ್ಕ ಚೇರಿಪ್ಪಾಡಿ ನಾಗತ್ತುಂಗಾಲ್‍ನಲ್ಲಿ ಪಾದಚಾರಿ ಮಹಿಳೆ ಕತ್ತಿನಿಂದ ಚಿನ್ನದ ಸರ ಅಪಹರಿಸಿದ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಮಂಗಳೂರು, ಕಂಕನಾಡಿ, ಬಂದರು, ಕೋಯಿಕ್ಕೋಡ್ ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ ಎಂದುಪೊಲೀಸರು ತಿಳಿಸಿದ್ದಾರೆ.