ಉತ್ತರ ಪ್ರದೇಶ: ಪತಿ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತಂದು ಕೊಟ್ಟಿಲ್ಲ ಎಂಬ ಕಾರಣಕ್ಕೆ ಪತ್ನಿ ಮುನಿಸಿಕೊಂಡು ತನ್ನ ತವರಿಗೆ ಹೋಗಿದ್ದಾಳೆ. ಒಂದೂವರೆ ತಿಂಗಳಿನಿಂದ ತಂದೆ ಮನೆಯಲ್ಲಿ ವಾಸವಾಗಿದ್ದಾಳೆ. ಬಳಿಕ ಅಲ್ಲಿಂದಲೇ ಪತಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾಳೆ.
ನಂತರ ಇಬ್ಬರೂ ಸಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಲ್ಲಿ ಪತ್ನಿ ತನ್ನ ಪತಿಯಿಂದ ದೈಹಿಕ ಕಿರುಕುಳ ಅನುಭವಿಸುತ್ತಿದ್ದೇನೆ ಅದಕ್ಕೆ ನಾನು ಆತನ ಮನೆಯನ್ನು ತೊರೆದಿದ್ದೇನೆ ಎಂದು ಹೇಳಿದ್ದಾಳೆ. ಅತ್ತ ಗಂಡನು ಪೊಲೀಸರ ಬಳಿ ತನ್ನ ಪತಿ ದಿನಾಲೂ ಕುರ್ಕುರೆಗೆ ಡಿಮ್ಯಾಂಡ್ ಮಾಡುತ್ತಾಳೆ. ದಿನನಿತ್ಯದ ತಿಂಡಿಗೆ ಬೇಡಿಕೆ ಇಡುತ್ತಾಳೆ ಎಂದು ದೂರಿದ್ದಾನೆ. ನಂತರ ಪೊಲೀಸರು ಈ ಪ್ರಕರಣವನ್ನು ಕುಟುಂಬ ಸಲಹಾ ಕೇಂದ್ರಕ್ಕೆ ನೀಡಿದ್ದಾರೆ.
ಬಳಿಕ ಇಬ್ಬರ ದೂರನ್ನು ಆಲಿಸಿದಾಗ ಪತ್ನಿಗೆ ಕುರ್ಕುರೆ ಮೇಲೆ ಅತಿಯಾದ ಒಲವು ಎಂಬುದು ತಿಳಿದು ಬಂದಿದೆ. ಆದರೆ ಪತಿ ಮಾತ್ರ ಇದನ್ನು ದಿನನಿತ್ಯ ತರಲು ಹಿಂದೇಟು ಹಾಕುತ್ತಿದ್ದ. ಇದೇ ಕಾರಣಕ್ಕೆ ಪತ್ನಿ ತನ್ನ ಪತಿಯ ಮನೆಯನ್ನು ತೊರೆದಿದ್ದಾಳೆ ಎಂದು ಗಮನಕ್ಕೆ ಬಂದಿದೆ.