HEALTH TIPS

ಮಿಲ್ಮಾ ಸ್ಥಾವರಗಳಲ್ಲಿ ಕಾರ್ಮಿಕರ ಮುಷ್ಕರ: ವಿತರಣೆ ಸ್ಥಗಿತ, ಪೂರೈಕೆ ಬಿಕ್ಕಟ್ಟಿನಲ್ಲಿ

                              ತಿರುವನಂತಪುರಂ: ಮಿಲ್ಮಾ ಕಾರ್ಖಾನೆಗಳ ಕಾರ್ಮಿಕರ ಮುಷ್ಕರದಿಂದ ರಾಜ್ಯದ ಹಾಲಿನ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ತಿರುವನಂತಪುರಂ, ಕೊಲ್ಲಂ ಮತ್ತು ಪತ್ತನಂತಿಟ್ಟ ಸ್ಥಾವರಗಳಲ್ಲಿ ಕಾರ್ಮಿಕರ ಮುಷ್ಕರ ನಡೆಯುತ್ತಿದೆ.

                    ನೌಕರರಿಗೆ ಬಡ್ತಿ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಮುಷ್ಕರ ನಡೆಸಲಾಗುತ್ತಿದೆ. ಮಿಲ್ಮಾ ತಿರುವನಂತಪುರಂ ಪ್ರಾದೇಶಿಕ ಒಕ್ಕೂಟದ ಅಧ್ಯಕ್ಷರನ್ನು ಮುಷ್ಕರ ನಿರತರು ದಿಗ್ಬಂಧನಗೊಳಿಸಿದ್ದಾರೆ. ಸ್ಥಾವರದಲ್ಲಿ ಕಾರ್ಮಿಕರ ಬಡ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

                     ಮುಷ್ಕರ ತೀವ್ರಗೊಂಡಿದ್ದರಿಂದ ಹಾಲು ಪೂರೈಕೆ ಬಿಕ್ಕಟ್ಟಿನಲ್ಲಿದೆ. ಹಾಲು ಸಿಗದ ಕಾರಣ ಅನೇಕರು ಅಂಗಡಿಗಳಲ್ಲಿ ಗದ್ದಲವೆಬ್ಬಿಸಿರುವುದೂ ವರದಿಯಾಗಿದೆ. ಮುಷ್ಕ್ಕರವನ್ನು ಶೀಘ್ರ ಅಂತ್ಯಗೊಳಿಸದಿದ್ದರೆ ರಾಜ್ಯದಲ್ಲಿ ಹಾಲು ಸಂಗ್ರಹಣೆಗೆ ತೀವ್ರ ತೊಂದರೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಹೈನುಗಾರರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಡೇರಿ ವ್ಯವಸ್ಥಾಪಕರು ಧರಣಿ ನಿರತರನ್ನು ಚರ್ಚೆಗೆ ಕರೆದರೂ ಅವರ ಮೇಲಿನ ಸುಳ್ಳು ಪ್ರಕರಣದ ಕುರಿತು ಚರ್ಚೆ ಮಾಡುವುದಿಲ್ಲ ಎಂಬುದು ಧರಣಿ ಮುಖಂಡರ ನಿಲುವು.

                      ಐಎನ್‍ಟಿಯುಸಿ ಮತ್ತು ಸಿಐಟಿಯು ಸಂಘಟನೆಗಳ ನೇತೃತ್ವದಲ್ಲಿ ಮುಷ್ಕರ ನಡೆಸಲಾಗುತ್ತಿದೆ. ಸೋಮವಾರ ಮತ್ತು ಮಂಗಳವಾರ ಅಧಿಕಾರಿಗಳ ಬಡ್ತಿಗಾಗಿ ಸಂದರ್ಶನಗಳು ನಡೆದಿವೆ. ಇದರೊಂದಿಗೆ ಕಾರ್ಮಿಕರ ಬಡ್ತಿಯನ್ನೂ ಮುಷ್ಕರ ನಿರತರು ಪರಿಗಣಿಸಬೇಕು. ಪ್ರತಿಭಟನೆ ತೀವ್ರಗೊಂಡಿದ್ದರಿಂದ ಸಂದರ್ಶನಕ್ಕೆ ಅಡ್ಡಿಯಾಯಿತು. ಕಾರ್ಮಿಕರ ಬಡ್ತಿ ಹಲವು ವರ್ಷಗಳಿಂದ ನಡೆಯುತ್ತಿಲ್ಲ, ಆಡಳಿತ ಮಂಡಳಿ ನ್ಯಾಯಯುತ ಬೇಡಿಕೆಯನ್ನು ನಿರಾಕರಿಸುತ್ತಿದೆ ಎಂದು ಧರಣಿ ನಿರತರು ಆರೋಪಿಸಿದರು.

                    ಬೇಡಿಕೆಯನ್ನು ಪರಿಗಣಿಸುವಂತೆ ಕಾರ್ಮಿಕ ಸಂಘಟನೆಗಳು ಪ್ರಾದೇಶಿಕ ಒಕ್ಕೂಟಕ್ಕೆ ಪತ್ರ ಬರೆದಿದ್ದವು. ಈ ತಿಂಗಳು ಕಾರ್ಮಿಕರ ಬಡ್ತಿಯನ್ನೂ ಖಾತ್ರಿಪಡಿಸುತ್ತೇವೆ ಎಂದು ಬರೆದುಕೊಟ್ಟರೆ ಮಾತ್ರ ಮುಷ್ಕರ ಅಂತ್ಯಗೊಳಿಸುತ್ತೇವೆ ಎಂಬ ನಿಲುವಿಗೆ ಸಂಘಗಳು ಮುಂದಾಗಿವೆ. ಕಳೆದ ವರ್ಷವೂ ಪ್ರಾದೇಶಿಕ ಒಕ್ಕೂಟಕ್ಕೆ ಹೊರಗುತ್ತಿಗೆ ನೀಡುವುದನ್ನು ನೌಕರರು ವಿರೋಧಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries