ಕಾಸರಗೋಡು: ತುಳು ಬಿಲ್ಲವ ಸಮಾಜದ ಆಚಾರ, ವಿಚಾರ, ಅನುಷ್ಠಾನಗಳ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿ ಕ್ರೋಢೀಕರಿಸಿ ರಚಿಸಲಾದ ಕೈಪಿಡಿಯ ಬಿಡುಗಡೆ ಸಮಾರಂಭ ಕಾಸರಗೋಡು ಅಡ್ಕತ್ತಬೈಲ್ ಸ್ರೀ ಕೋಟಿಚೆನ್ನಯ ಗರಡಿಯಲ್ಲಿ ಜರುಗಿತು.
ದೇಶದ ಪರಮೋಚ್ಛ ತನಿಖಾ ಸಂಸ್ಥೆ ಸಿಬಿಐ ಬೆಂಗಳೂರಿನ ಹಿರಿಯ ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಅವರು ಕೃತಿಯನ್ನು ಗರಡಿ ಪಾತ್ರಿ ರಮೇಶ್ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಕರಕ್ಕೋಡು ತರವಾಡಿನ ವಸಂತ ಪೂಜಾರಿ, ಸೋಮಪ್ಪ ಪೂಜಾರಿ, ಬಿಲ್ಲವ ಸಮಾಜದ ಮುಖಂಡರಾದ ರಘು ಕೆ. ಮೀಪುಗುರಿ, ಕಮಲಕ್ಷ ಸುವರ್ಣ, ದಯಾನಂದ ಉಪಸ್ಥಿತರಿದ್ದರು. ಕೃತಿ ರಚಿಸಿದ ಅಶೋಕ್ ಬಾಡೂರು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಕೃತಿ ಮುದ್ರಣಕ್ಕೆ ಸಹಕರಿಸಿದ ಕಾಸರಗೋಡಿನ ಸುರೇಶ್ ಸುವರ್ಣ ಅವರನ್ನು ಗೌರವಿಸಲಾಯಿತು. ಭಾಸ್ಕರ ಕೆ. ಕಾರ್ಯಕ್ರಮ ನಿರೂಪಿಸಿದರು. ಶಿವ ಕೆ. ವಂದಿಸಿದರು.