HEALTH TIPS

ಎಸ್‌ಇಪಿ ಜಾರಿಗೆ ಮಂಗಳೂರು ವಿವಿ ಆದೇಶ

            ಮಂಗಳೂರು: ರಾಜ್ಯ ಸರಕಾರವು ನೀಡಿರುವ ಆದೇಶದಂತೆ 2024-25ನೇ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿ ಲಯವು ತನ್ನ ವ್ಯಾಪ್ತಿಗೊಳಪಟ್ಟ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ)ಅನ್ವಯ ನಡೆಸಲು ಆದೇಶ ನೀಡಿದೆ.

              ಇನ್ನು ಮುಂದೆ ವಿದ್ಯಾರ್ಥಿಗಳಿಗೆ 6 ಸೆಮಿಸ್ಟರ್‌ಗಳ ಮೂರು ವರ್ಷಗಳ ಪದವಿ ಶಿಕ್ಷಣದಲ್ಲಿ ಮೂರು ಐಚ್ಚಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

          ಈ ಹಿಂದೆ ಬಹು ಶಿಸ್ತಿಯ ವಿಷಯ(ಇಂಟರ್ ಡಿಸಿಪ್ಲಿನರಿ ಸಬ್ಜೆಕ್ಟ್)ಗಳನ್ನು ಆಯ್ಕೆ ಮಾಡಿ ಕೊಂಡು ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವ ಅವಕಾಶ ಇತ್ತು. ಆದರೆ ಎಸ್‌ಇಪಿ ಪ್ರಕಾರ ಮೂರು ಮತ್ತು ನಾಲ್ಕನೇ ಸೆಮಿಸ್ಟರ್‌ನಲ್ಲಿ ಮಾತ್ರವೇ ಅಂತರ್‌ವರ್ಗಿಯ ಅಥವಾ ಬಹು ಶಿಸ್ತಿನ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬೇಕಿದೆ.

                 ಈ ಹಿಂದೆ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನ್ವಯ 4 ವರ್ಷಗಳ ಪದವಿಯೊಂದಿಗೆ 8 ಸೆಮಿಸ್ಟರ್‌ಗಳನ್ನು ಒಳಗೊಂಡ ಆನರ್ಸ್ ಪದವಿಯನ್ನು ನೀಡಲಾಗುತ್ತಿತ್ತು. ಪ್ರಸ್ತುತ ರಾಜ್ಯ ಸರಕಾರ ಇದೇ ಮೇ 8ರಂದು ಎಸ್‌ಇಪಿ ಜಾರಿಗೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಮತ್ತು ವಿಶ್ವವಿದ್ಯಾನಿಲಯಗಳ ಘಟಕ ಕಾಲೇಜುಗಳಲ್ಲಿ 2024-25ನೇ ಸಾಲಿಗೆ ಎಸ್‌ಇಪಿ ಮಾರ್ಗಸೂಚಿಯ ಅನುಸಾರವಾಗಿ ಪ್ರವೇಶ ನೀಡುವಂತೆ ಸರಕಾರ ಆದೇಶಿಸಿದೆ. ಅದರಂತೆ

ಮಂಗಳೂರು ವಿವಿಯ ವ್ಯಾಪ್ತಿಗೊಳಪಟ್ಟ ಕಾಲೇಜುಗಳಲ್ಲೂ ಪ್ರಥಮ ವರ್ಷದ ಪದವಿಗೆ ಪ್ರವೇಶಾತಿ ಎಸ್‌ಇಪಿ ಅನ್ವಯ ನಡೆಯಲಿದೆ. 2021-22ರಲ್ಲಿ ಜಾರಿಯಾಗಿದ್ದ ಎನ್‌ಇಪಿ 2023-24ನೇ ಸಾಲಿನಲ್ಲಿ ಕೊನೆಗೊಂಡಂತಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries