ಕಾಸರಗೋಡು: ಕೇರಳ ಸರ್ಕಾರಿ ಸರ್ಕಾರಿ ಮೆಡಿಕಲ್ ಆಫೀಸರ್ಸ್ ಅಸೋಸಿಯೇಶನ್ ನೇತ್ರತ್ವದಲ್ಲಿ 'ಸುರಕ್ಷಾ ದಿನ'ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಆಚರಿಸಲಾಯಿತು. ಡಾ. ವಂದನಾ ದಾಸ್ ಅವರ ಕೊಲೆ ಪ್ರಕರಣದ ಒಂದನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜನರಲ್ ಆಸ್ಪತ್ರೆ ಸಹಾಯಕ ವೈದ್ಯಾಧಿಕಾರಿ ಡಾ.ಜಮಾಲ್ ಅಹಮ್ಮದ್ ಸಮಾರಂಭ ಉದ್ಘಾಟಿಸಿದರು. ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಹಾಗೂ ಇತರ ಸಿಬ್ಬಂದಿಗೆ ಭೀತಿ ರಹಿತವಾಗಿ, ಸುರಕ್ಷತೆಯೊಂದಿಗೆ ಕೆಲಸ ನಿರ್ವಹಿಸಲು ಸಂಬಂಧಪಟ್ಟವರು ಅಗತ್ಯ ಸನ್ನಿವೇಶ ಕಲ್ಪಿಸಿಕೊಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಡಾ. ಅರುಣ್ ರಾವ್, ನರ್ಸಿಂಗ್ ಸೂಪರಿಂಟೆಂಡೆಂಟ್ ಉಷಾ, ಮಾಹಿನ್ ಕುನ್ನಿಲ್ ಉಪಸ್ಥಿತರಿದ್ದರು.