ಕಾಸರಗೋಡು: ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಉದುಮ ಮುಕ್ಕುನ್ನೋತ್ ನಿವಾಸಿ ನಂದಿಕೇಶನ್ ಮಾಸ್ಟರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಉದುಮದ ಬಾರ ಮುಕ್ಕುನ್ನೋತ್ ಕಾವು ಭಗವತೀ ದೇವಸ್ಥಾನದಲ್ಲಿ ಜರುಗಿತು.
ಶಿಕ್ಷಕರಾಗಿ ವಋತ್ತಿ ಜೀವನ ಆರಂಭಿಸಿದ್ದ ಇವರು, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ನಂತರ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಬಾರ ಮುಕುನ್ನೋತ್ ಕಾವ್ ಶ್ರೀ ಭಗವತಿ ದೇವಸ್ಥಾನದ ಪ್ರಮುಖ ಕಾರ್ಯನಿರ್ವಾಹಕರಾಗಿದ್ದು, ಧನಲಕ್ಷ್ಮಿ ಸಮೂಹ ಹೂಡಿಕೆ ಯೋಜನೆಯ ನಿಧಿಸಂಗ್ರಹ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ನಂದಿಕೇಶನ್ ಅವರನ್ನು ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.ಕುಞÂಕಣ್ಣನ್ ನಾಯರ್, ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿಯ ಕಾರ್ಯಕಾರಿ ಸದಸ್ಯರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.