ನವದೆಹಲಿ: ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ದೆಹಲಿ-ವಡೋದರಾ ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಯೊಬ್ಬರು ವಿಮಾನದ ವಾಶ್ ರೂಂನಲ್ಲಿ "ಬಾಂಬ್" ಎಂದು ಬರೆದಿರುವ ಟಿಶ್ಯೂ ಪೇಪರ್ ನ್ನು ಕಂಡು ಭಯಭೀತರಾಗಿ ವಿಮಾನದಲ್ಲಿದ್ದವರೆಲ್ಲಾ ತಿಳಿಸಿ ಕೆಲಕಾಲ ಗೊಂದಲ ಉಂಟಾಯಿತು.
ನಿನ್ನೆ ಸಂಜೆ ಬಾಂಬ್ ಎಂದು ಬರೆದ ಟಿಶ್ಯೂ ಪೇಪರ್ ಪತ್ತೆಯಾದ ನಂತರ ಇಡೀ ವಿಮಾನದಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಜೆ 7 ಗಂಟೆಗೆ ಟಿಶ್ಯೂ ಪೇಪರ್ ನ್ನು ಸಿಬ್ಬಂದಿ ಗುರುತಿಸಿದಾಗ ವಿಮಾನವು ಟೇಕ್-ಆಫ್‌ಗೆ ಸಿದ್ಧವಾಗಿದೆ ಎಂದು ಹೇಳಿದರು. ಕೂಡಲೇ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಮತ್ತು ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಯುವಂತೆ ಸೂಚಿಸಲಾಯಿತು. ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿತ್ತಾದರೂ ಏನೂ ಪತ್ತೆಯಾಗಿಲ್ಲ. ನಂತರ ಪ್ರಯಾಣಿಕರು ಮತ್ತೊಂದು ವಿಮಾನವನ್ನು ಏರಿ ಪ್ರಯಾಣ ಸಾಗಿದ್ದಾರೆ.