ಮಲಪ್ಪುರಂ; ತೇಂಜಿಪಾಲಂ ಕೋಲಂನಲ್ಲಿರುವ ಮೊಳಂಚೇರಿ ಭಗವತಿ ದೇವಸ್ಥಾನದ ತೀರ್ಥ ಬಾವಿಯನ್ನು ಅಶುದ್ಧಗೊಳಿಸುವ ಯತ್ನ ನಡೆದಿದೆ. ದೇವಸ್ಥಾನದ ಬಾವಿಯ ಮೇಲೆ ಹಾಕಿದ್ದ ಗ್ರಿಲ್ ಹಾಗೂ ಬಲೆ ಸರಿಸಿ ಅಶುದ್ಧ ಗೊಳಿಸಲು ಪ್ರಯತ್ನ ನಡೆಸಲಾಯಿತು. ಕೂಡಲೇ ಮಧ್ಯಪ್ರವೇಶಿಸುವಂತೆ ದೇವಸ್ಥಾನ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ತೇಂಜಿಪಾಲಂ ಪೋಲೀಸರಿಗೆ ದೂರು ನೀಡಿದ್ದಾರೆ.
ನಿನ್ನೆ ಘಟನೆ ನಡೆದಿದೆ. ಶತಮಾನಕ್ಕೂ ಹೆಚ್ಚು ಕಾಲ ದೇವಸ್ಥಾನಕ್ಕೆ ತೀರ್ಥ ಬಾವಿಯಿಂದ ನೀರು ಪೂರೈಕೆಯಾಗುತ್ತಿತ್ತು. ಇಲ್ಲಿಂದ ಸಂಗ್ರಹವಾಗುವ ನೀರನ್ನೇ ದೇಗುಲದಲ್ಲಿ ಪೂಜೆಗೂ ಬಳಸುತ್ತಾರೆ. ದೇವಸ್ಥಾನ ಮತ್ತು ಬಾವಿ ನಡುವೆ 50 ಮೀಟರ್ ಅಂತರವಿದೆ. ಬಾವಿಯ ಸುತ್ತಲಿನ ಅಕ್ಕಪಕ್ಕದ ಮನೆಯವರೊಂದಿಗಿನ ವಿವಾದಗಳಿದ್ದು, ಪ್ರಕರಣಗಳು ನ್ಯಾಯಾಲಯದ ಪರಿಗಣನೆಯಲ್ಲಿದೆ. ಈ ಸಂಬಂಧ ನ್ಯಾಯಾಲಯದ ತಡೆಯಾಜ್ಞೆಯೂ ಇದೆ. ಇದೇ ತಿಂಗಳ 21 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಬೇಕಿದ್ದಾಗ ಹೊಸ ವಿವಾದ ಘಟನೆ ನಡೆದಿದೆ.
ಸದ್ಯ ದೇವಸ್ಥಾನಕ್ಕೆ ನೀರು ಸಂಗ್ರಹಿಸಲು ಸಾಧ್ಯವಾಗದ ಕಾರಣ ದಾರಿ ಸಂಪೂರ್ಣ ಕಲ್ಲಿನಿಂದ ಮುಚ್ಚಲ್ಪಟ್ಟಿದೆ. ಪೋಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲು ಭಕ್ತರು ನಿರ್ಧರಿಸಿದ್ದಾರೆ.