ಬೆಂಗಳೂರು: ಬೆಂಗಳೂರಿನಿಂದ ಕೊಚ್ಚಿಗೆ ಹೊರಟಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ತುರ್ತು ಭೂಸ್ಪರ್ಶ ಮಾಡಿದೆ.
ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಭಾರಿ ಅನಾಹುತ ತಪ್ಪಿದೆ. ಏರ್ ಇಂಡಿಯಾ ಎಕ್ಸ್‍ಪ್ರೆಸ್ Iಘಿ 1132 ವಿಮಾನದ ಪುಣೆ-ಬೆಂಗಳೂರು-ಕೊಚ್ಚಿಯ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೂಡಲೇ ಬೆಂಗಳೂರಿನಲ್ಲಿ ಇಳಿಸಲಾಯಿತು.
ನಿನ್ನೆ ರಾತ್ರಿ 11 ಗಂಟೆಗೆ ಪುಣೆಯಿಂದ ಬೆಂಗಳೂರಿಗೆ ಟೇಕ್ ಆಫ್ ಆಗಿ ಪ್ರಯಾಣಿಕರನ್ನು ಬಿಟ್ಟು ಕೊಚ್ಚಿಯತ್ತ ತೆರಳುವಾಗ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳದ ನೆರವಿನಿಂದ ಬೆಂಕಿ ನಂದಿಸಲಾಯಿತು. ತುರ್ತು ಬಾಗಿಲುಗಳ ಮೂಲಕ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಇದೇ ವೇಳೆ ಕಾಲ್ತುಳಿತದಲ್ಲಿ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿಮಾನದಲ್ಲಿ 179 ಮಂದಿ ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ನಿನ್ನೆ ರಾತ್ರಿ 7.40ಕ್ಕೆ ಪುಣೆಯಿಂದ ಹೊರಡಬೇಕಿದ್ದ ವಿಮಾನ ತಡವಾಗಿ 8.20ಕ್ಕೆ ಹೊರಟಿತು. ಬೆಳಗ್ಗೆ 10.30ಕ್ಕೆ ಬೆಂಗಳೂರಿಗೆ ಬಂದಿಳಿದ ನಂತರ 10.50ಕ್ಕೆ ಕೊಚ್ಚಿಗೆ ಹೊರಟಿತು. ವಿಮಾನ ಟೇಕ್ ಆಫ್ ಆದ 4 ನಿಮಿಷಗಳ ನಂತರ ರೆಕ್ಕೆಯ ಕೆಳಗೆ ಬೆಂಕಿ ಹೊತ್ತಿಕೊಂಡಿತು.
ಶನಿವಾರ ತಿರುವನಂತಪುರದಿಂದ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಏರ್ ಕಂಪ್ರೆಸರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ತಿರುವನಂತಪುರಂ-ಬೆಂಗಳೂರು ವಿಮಾನದ ಕ್ಯಾಬಿನ್ ಪ್ರೆಶರ್ ಸಿಸ್ಟಮ್ ಕೆಟ್ಟುಹೋದ ನಂತರ ಆಕ್ಸಿಜನ್ ಮಾಸ್ಕ್‍ಗಳು ಹೊರಬಂದವು. ಆಗ ಕೆಲ ಪ್ರಯಾಣಿಕರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅದರ ನಂತರ, ತಕ್ಷಣ ಅವರನ್ನು ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ವಿಮಾನದಲ್ಲಿ 137 ಪ್ರಯಾಣಿಕರಿದ್ದರು, ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ ನಂತರ, ಸಮಸ್ಯೆಯನ್ನು ಪರಿಹರಿಸಲಾಯಿತು. ಪ್ರಯಾಣಿಕರನ್ನು ಬೇರೆ ವಿಮಾನದಲ್ಲಿ ಕಳುಹಿಸಲಾಯಿತು.