HEALTH TIPS

ಕ್ಷಿಪಣಿ ನೆರವಿನಿಂದ ಟಾರ್ಪಿಡೊ ಉಡ್ಡಯನ ಪರೀಕ್ಷೆ ಯಶಸ್ವಿ

           ಬಾಲೇಶ್ವರ : 'ಸೂಪರ್‌ಸಾನಿಕ್‌ ಕ್ಷಿಪಣಿಗಳ ಸಹಾಯದಿಂದ ಟಾರ್ಪಿಡೊ ಉಡ್ಡಯನ ವ್ಯವಸ್ಥೆ'(ಎಸ್‌ಎಂಎಆರ್‌ಟಿ-ಸ್ಮಾರ್ಟ್‌)ಯ ಪರೀಕ್ಷಾರ್ಥ ಪ್ರಯೋಗ ಇಲ್ಲಿಗೆ ಸಮೀಪದ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ದ್ವೀಪದಲ್ಲಿ ಬುಧವಾರ ಯಶಸ್ವಿಯಾಗಿ ನೆರವೇರಿಸಲಾಯಿತು.

            ಬೆಳಿಗ್ಗೆ 8.30ರ ವೇಳೆಗೆ, ಸಂಚಾರ ಲಾಂಚರ್‌ನ ಸಹಾಯದಿಂದ ಈ ವ್ಯವಸ್ಥೆಯ ಪರೀಕ್ಷೆಯನ್ನು ನೆರವೇರಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.

            'ಕ್ಷಿಪಣಿ ವ್ಯವಸ್ಥೆಯ ಎಲ್ಲ ಭಾಗಗಳು ಸಮಪರ್ಕವಾಗಿ ಕಾರ್ಯನಿರ್ವಹಿಸುವುದನ್ನು ಈ ಪರೀಕ್ಷೆ ದೃಢಪಡಿಸಿದೆ. ಇದು ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನಿಗ್ರಹ ಸಾಮರ್ಥ್ಯವನ್ನು ಹೆಚ್ಚಸಲಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

           ಮುಂದಿನ ತಲೆಮಾರಿನ, ಟಾರ್ಪಿಡೊ ಚಿಮ್ಮುವಂತೆ ಮಾಡುವ ಕಡಿಮೆ ತೂಕದ ಈ 'ಸ್ಮಾರ್ಟ್‌' ಕ್ಷಿಪಣಿ ವ್ಯವಸ್ಥೆಯನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.

                 ಶತ್ರುಪಾಳಯದ ಯುದ್ಧನೌಕೆಗಳನ್ನು ನಾಶಪಡಿಸುವ ಸಿಡಿತಲೆಗಳಿಗೆ ಟಾರ್ಪಿಡೊ ಎನ್ನಲಾಗುತ್ತದೆ. ಇವುಗಳನ್ನು ನೀರಿನ ಮೇಲ್ಪದರ ಅಥವಾ ಒಳಗಡೆಯಿಂದ ಹಾರಿಸಲಾಗುತ್ತದೆ. ನಿರ್ದೇಶಿತ ಗುರಿಗೆ ಅಪ್ಪಳಿಸಿದಾಗ ಇಲ್ಲವೇ ಅವುಗಳ ಸಮೀಪ ಹೋದಾಗ ಈ ಸಿಡಿತಲೆಗಳು ಸ್ಫೋಟಗೊಳ್ಳುತ್ತವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries