ಉಪ್ಪಳ: ಮಂಗಲ್ಪಾಡಿ ವ್ಯಾಪ್ತಿಯಲ್ಲಿ ಮಕ್ಕಳ ಅಪಹರಣಕಾರರು ಸುತ್ತಾಡುತ್ತಿರುವ ಬಗ್ಗೆ ವದಂತಿ ಹಬ್ಬಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಯಿತು. ಶಿರಿಯಾ ಕುನ್ನಿಲ್ ಪ್ರದೇಶದಲ್ಲಿ ಇತ್ತೀಚೆಗೆ ಗಲ್ಫ್ ಉದ್ಯೋಗಿಯೊಬ್ಬರ ಮನೆ ಗೇಟ್ ಸನಿಹ ವಾಹನದಲ್ಲಿ ಆಗಮಿಸಿದ ವ್ಯಕ್ತಿಯೊಬ್ಬ ಅಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕರ ಹರೆಯದ ಬಾಲಕಿಗೆ ಚಾಕೋಲೇಟ್ ಆಮಿಷವೊಡ್ಡಿ ಸನಿಹ ಕರೆದಿದ್ದು, ಅಪರಿಚಿತ ವ್ಯಕ್ತಿಯನ್ನು ನಿಂತು ನೋಡುತ್ತಿರುವ ಮಧ್ಯೆ ಮನೆಯಿಂದ ಬಾಲಕನೊಬ್ಬ ಹೊರಬರುತ್ತಿರುವುದನ್ನು ಗಮನಿಸಿದ ವ್ಯಕ್ತಿ ಕಾರನ್ನೇರಿ ಪರಾರಿಯಾಗಿದ್ದನು.
ಇದು ಮಕ್ಕಳ ಅಪಹರಣಕಾರರಾಗಿರಬೇಕೆಂದು ಸಂಆಯಿಸಲಾಗಿದ್ದು, ಈ ಬಗ್ಗೆ ಮಂಗಲ್ಪಾಡಿ ಗ್ರಾಪಂ ಸದಸ್ಯೆ ಬೀಫಾತಿಮ್ಮ ಅಬೂಬಕ್ಕರ್ ಪೊಲೀಸರಿಗೂ ಮಾಹಿತಿ ನೀಡಿದ್ದರು. ಆಸುಪಾಸಿನ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಓಮ್ನಿ ವಾಹನವೊಂದು ಅತಿಯಾದ ವೇಗದಲ್ಲಿ ಈ ಪ್ರದೇಶದಿಂದ ಸಂಚರಿಸಿರುವುದು ಕಂಡುಬಂದಿತ್ತು.