HEALTH TIPS

ಪದ್ಮಶ್ರೀ ಸ್ವೀಕರಿಸಿದ ಸತ್ಯನಾರಾಯಣ ಬೆಳೇರಿ

                    ಮುಳ್ಳೇರಿಯ: ಸಾಂಪ್ರದಾಯಿಕ ಭತ್ತದ ತಳಿಗಳ ಅನನ್ಯ ಸಂಗ್ರಾಹಕ, ಗಡಿನಾಡು ಕಾಸರಗೋಡಿನ ಅನಘ್ರ್ಯ ಕೃಷಿ ಸಾಧಕ ಸತ್ಯನಾರಾಯಣ ಬೆಳೇರಿ ಅವರಿಗೆ ವಿವಿಧ ಸಾಧಕರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು.

                      ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಾಂಬೆ ಸಮಾಚಾರ ಪತ್ರಿಕೆ ಮಾಲೀಕ ಹಾರ್ಮುಸ್ಜಿ ಎನ್ ಕಾಮಾ, ಬಿಜೆಪಿ ನಾಯಕ ಓ ರಾಜಗೋಪಾಲ್, ಲಡಾಖ್‍ನ ಆಧ್ಯಾತ್ಮಿಕ ನಾಯಕ ತೊಗ್ಡಾನ್ ರಿಂಪೆÇೀಚೆ, ತಮಿಳು ನಟ ದಿವಂಗತ "ಕ್ಯಾಪ್ಟನ್" ವಿಜಯಕಾಂತ್ ,ಗುಜರಾತಿ ಪತ್ರಿಕೆ "ಜನ್ಮಭೂಮಿ" ಸಿಇಒ ಕುಂದನ್ ವ್ಯಾಸ್, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ತೆಲುಗು ನಟ ಕೊನಿಡೆಲಾ ಚಿರಂಜೀವಿ, ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿವಂಗತ ಎಂ ಫಾತಿಮಾ ಬೀವಿ ಮತ್ತಿತರರು ಪ್ರಶಸ್ತಿ ಸ್ವೀಕರಿಸಿದರು.

                    ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ.

                ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾದಿನದಂದು ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. 2024 ರಲ್ಲಿ ಐದು ಪದ್ಮ ವಿಭೂಷ, 17 ಪದ್ಮ ಭೂಷಣ ಮತ್ತು 110 ಪದ್ಮ ಪ್ರಶಸ್ತಿ ಸೇರಿದಂತೆ ಒಟ್ಟಾರೇ 132 ಪ್ರಶಸ್ತಿಗಳನ್ನು ರಾಷ್ಟ್ರಪತಿ ಘೋಷಿಸಿದ್ದರು.

                  ಪ್ರಶಸ್ತಿ ಪುರಸ್ಕøತರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಏಪ್ರಿಲ್ 22 ರಂದು ನೀಡಲಾಗಿತ್ತು. ಉಳಿದವರಿಗೆ ಗುರುವಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

                   ಸತ್ಯನಾರಾಯಣ ಬೆಳೇರಿ ಅವರು ನೆಟ್ಟಣಿಗೆ ಸಮೀಪದ ಬೆಳೇರಿ ನಿವಾಸಿಯಾಗಿದ್ದು, ವರ್ಷಗಳಿಂದ 600 ಕ್ಕಿಂತಲೂ ಹೆಚ್ಚು ಭತ್ತದ ಸಾಂಪ್ರದಾಯಿಕ ತಳಿಗಳನ್ನು ಸಂಗ್ರಹಿಸಿ, ಸಂರಕ್ಷಿಸುವಲ್ಲಿ ವಿಶೇಷ ಕೊಡುಗೆ ನೀಡಿರುವುದನ್ನು ಪರಿಗಣಿಸಿ ಪದ್ಮಶ್ರೀ ಅವರಿಗೆ ಒಲಿದು ಬಂದಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries