ಕೊಚ್ಚಿ: ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೋಲೀಸ್ ಪಡೆಯಲ್ಲಿ ಸಾಕಷ್ಟು ಬಲವಿಲ್ಲ. ಇನ್ನೂ 10 ಸಾವಿರ ಪೋಲೀಸರ ಅಗತ್ಯವಿದೆ. ಕನಿಷ್ಠ 7000 ಪೋಲೀಸರನ್ನಾದರೂ ನೇಮಿಸುವ ಅಗತ್ಯವಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿಯ ಪ್ರಕಾರ, 2022 ರಲ್ಲಿ ರಾಜ್ಯದಲ್ಲಿ 2,35,858 ಕ್ರಿಮಿನಲ್ ಅಪರಾಧಗಳು ನಡೆದಿವೆ, ಪ್ರಸ್ತುತ 3.3 ಕೋಟಿ ಜನಸಂಖ್ಯೆಗೆ ಕೇರಳ ಪೋಲೀಸರ ಸಂಖ್ಯೆ ಕೇವಲ 53,222 ಆಗಿದೆ. ನಾಗರಿಕ ಸೇವಾ ಸುಧಾರಣಾ ಇಲಾಖೆಯ 2016 ರ ಅಧ್ಯಯನ ವರದಿಯ ಪ್ರಕಾರ, ಕೇರಳ ಪೋಲೀಸರಿಗೆ ಶಿಫಾರಸು ಮಾಡಲಾದ ಪೋಲೀಸ್ ಅನುಪಾತವು ಪ್ರತಿ 500 ನಾಗರಿಕರಿಗೆ ಒಬ್ಬ ಪೋಲೀಸ್ ಅಧಿಕಾರಿಯಾಗಿ ಬೇಕು ಎಂದಿದೆ.
ಆದರೆ ಪ್ರಸ್ತುತ ಒಬ್ಬ ಪೋಲೀಸ್ ಅಧಿಕಾರಿ 656 ನಾಗರಿಕರನ್ನು ನಿಭಾಯಿಸಬೇಕಾಗಿದೆ. 3.3 ಕೋಟಿ ಜನರಿಗೆ ಇನ್ನೂ 7 ಸಾವಿರ ಪೋಲೀಸರು ಬೇಕು ಎಂಬ 2016ರ ಸರ್ಕಾರದ್ದೇ ನಿಯಮ ಪಾಲನೆಯಾಗಿಲ್ಲ.