ಕೊಲಂಬೊ (PTI): ಭಾರತ ಸೇರಿದಂತೆ ಏಳು ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಶುಲ್ಕರಹಿತವಾಗಿ ಪ್ರವಾಸಿ ವೀಸಾ ನೀಡಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರ ಮಂಗಳವಾರ ಪ್ರಕಟಿಸಿದೆ.
ಭಾರತವಲ್ಲದೆ ಚೀನಾ, ರಷ್ಯಾ, ಜಪಾನ್, ಮಲೇಷ್ಯಾ, ಥಾಯ್ಲೆಂಡ್, ಇಂಡೊನೇಷ್ಯಾ ರಾಷ್ಟ್ರಗಳ ಪ್ರವಾಸಿಗಳಿಗೆ ಶುಲ್ಕರಹಿತವಾಗಿ ವೀಸಾ ಸೇವೆ ನೀಡಲಾಗುತ್ತದೆ ಎಂದು ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಕಚೇರಿಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
'ವಿದೇಶಿಯರಿಗೆ 30 ದಿನ ಅವಧಿಯ ವೀಸಾಗಾಗಿ 50 ಡಾಲರ್ ಶುಲ್ಕ ವಿಧಿಸುವ ಹಾಗೂ ಭಾರತ ಸೇರಿ ಏಳು ರಾಷ್ಟ್ರಗಳ ಪ್ರವಾಸಿಗರಿಗೆ ಶುಲ್ಕರಹಿತ ವೀಸಾ ನೀಡುವ ವ್ಯವಸ್ಥೆಯನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ' ಎಂದು ಹೇಳಿಕೆಯು ಸ್ಪಷ್ಟಪಡಿಸಿದೆ.