ಲಂಡನ್: ಬೇಹುಗಾರಿಕೆ ಪ್ರಕರಣದಲ್ಲಿ ಅಮೆರಿಕಕ್ಕೆ ಗಡೀಪಾರು ಮಾಡುವುದನ್ನು ಪ್ರಶ್ನಿಸಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರು ಮೇಲ್ಮನವಿ ಸಲ್ಲಿಸಬಹುದು ಎಂದು ಲಂಡನ್ ಕೋರ್ಟ್ ಸೋಮವಾರ ಹೇಳಿದೆ. ಇದರಿಂದಾಗಿ ದೀರ್ಘಕಾಲದ ಕಾನೂನು ಹೋರಾಟ ಮತ್ತಷ್ಟು ವಿಳಂಬವಾಗಲಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ಟೋರಿಯಾ ಶಾರ್ಪ್ ಮತ್ತು ಜೆರೆಮಿ ಜಾನ್ಸನ್ ಅವರು, 'ಬ್ರಿಟನ್ ಸರ್ಕಾರದ ಗಡೀಪಾರು ಆದೇಶವನ್ನು ಪ್ರಶ್ನಿಸಿ ಅಸಾಂಜ್ ಅರ್ಜಿ ಸಲ್ಲಿಸಬಹುದು' ಎಂದರು.
ಅಸಾಂಜ್ ವಿರುದ್ಧ 18 ಬೇಹುಗಾರಿಕೆ ಪ್ರಕರಣಗಳು ದಾಖಲಾಗಿವೆ.
ಆಸ್ಟ್ರೇಲಿಯಾ ಪ್ರಜೆ ಅಸಾಂಜ್ ಅವರು, ಅಮೆರಿಕಕ್ಕೆ ಸಂಬಂಧಿಸಿದ ಅನೇಕ ರಹಸ್ಯ ವಿಷಯಗಳನ್ನು ವಿಕಿಲೀಕ್ಸ್ ಮೂಲಕ ಸೋರಿಕೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಗಡೀಪಾರಿಗೆ ಅಮೆರಿಕ ಕಾನೂನು ಹೋರಾಟ ನಡೆಸುತ್ತಿದೆ. ಕಳೆದ ಐದು ವರ್ಷಗಳಿಂದ ಅವರು ಲಂಡನ್‌ನ ಸೆರೆಮನೆಯಲ್ಲಿದ್ದಾರೆ. ಅದಕ್ಕೂ ಮುನ್ನ ಅವರು ಲಂಡನ್‌ನ ಈಕ್ವೆಡಾರ್ ರಾಯಭಾರಿ ಕಚೇರಿಯಲ್ಲಿ ಏಳು ವರ್ಷ ಆಶ್ರಯ ಪಡೆದಿದ್ದರು.