HEALTH TIPS

ಮುಂಗಾರಿನ ಬಿರುಸು-ಸಂದಿಗ್ಧಾವಸ್ಥೆಯಿಂದ ಪಾರಾಗಲು ವಿಪತ್ತು ನಿವಾರಣಾ ಪ್ರಾಧಿಕಾರದ ಮಾರ್ಗಸೂಚಿ

      

        ಕಾಸರಗೋಡು: ಮುಂಗಾರು ಆರಂಭಕ್ಕೂ ಮೊದಲು, ಕಾಸರಗೋಡು ಜಿಲ್ಲೆಯಲ್ಲಿ ಬೇಸಿಗೆ ಮಳೆ ಜನರಲ್ಲಿ ಭೀತಿಯನ್ನು ಸೃಷ್ಟಿಸಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಬೇಸಿಗೆ ಮಳೆ ಜಿಲ್ಲೆಯ ಜನತೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಮಳೆಗಾಲ ಪೂರ್ವ ಶುಚೀಕರಣ ಹಾಗೂ ಇತರ ಸಿದ್ಧತಾ ಕಾರ್ಯಗಳ ಬಗ್ಗೆ ಗಮನಹರಿಸುವಂತೆ ಮಾಡಿದೆ.  

      ಮುಂಗಾರಿನ ಬಲವಾದ ಗಾಳಿ, ಸಿಡಿಲಿನಿಂದ ಕೂಡಿದ ಮಳೆ ಕೇರಳದಲ್ಲಿ ಅತಿ ಹೆಚ್ಚು ಹಾನಿ ತಂದೊಡ್ಡುತ್ತಿದ್ದು, ಈ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ರಾಜ್ಯ ವಿಪತ್ತು ನಿವಾರಣಾ ಪ್ರಾಧಿಕಾರ ಕೆಲವೊಂದು ಮಾರ್ಗಸೂಚಿ ಹೊರಡಿಸಿದೆ. 

           ಗಾಳಿ ಅಥವಾ ಮಳೆಗೆ ಮರಗಳ ಕೆಳಗೆ ನಿಲ್ಲುವುದಾಗಲಿ, ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸದಿರುಂತೆ ಸೂಚಿಸಲಾಗಿದೆ.  ಮನೆಯ ಅಂಗಳದಲ್ಲಿರುವ ಮರಗಳ ಅಪಾಯಕಾರಿ ಕೊಂಬೆಗಳನ್ನು ಕತ್ತರಿಸುವುದು, ಸಾರ್ವಜನಿಕ ಪ್ರದೇಶಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಮರಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು. ಬಿರುಸಿನ ಗಾಳಿ, ಮಳೆಗೆ ಮನೆಯೊಳಗೆ ಇದ್ದುಕೊಂಡು ಜಾಗ್ರತೆ ಪಾಳಿಸಬೇಕಾಗಿದೆ.  ಹುಲ್ಲುಹಾಸಿನ, ಟಿನ್‍ಶೀಟ್ ಅಳವಡಿಸಿದ ಅಥವಾ ಸೀಲಿಂಗ್ ಇಲ್ಲದ ಮನೆಗಳಲ್ಲಿ ವಾಸಿಸುವ ನಿವಾಸಿಗಳು ಮುಂಚಿತವಾಗಿ ಅಧಿಕಾರಿಗಳನ್ನು (1077 ನಲ್ಲಿ) ಸಂಪರ್ಕಿಸುವುದರ ಜತೆಗೆ, ಅಧಿಕಾರಿಗಳು ನೀಡುವ ಎಚ್ಚರಿಕೆ ಸಂದೇಶ ಪಾಲಿಸಿ,  ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಗೊಳ್ಳಬೇಕು.  ಸ್ಥಳಾಂತರ ಪ್ರಕ್ರಿಯೆಗೆ ಸ್ಥಳೀಯಾಡಳಿತ ಸಂಸ್ಥೆಗಳು, ಕಂದಾಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸಹಕರಿಸಬೇಖು.  ಬಿರುಸಿನ ಗಾಳಿ, ಮಳೆಗೆ ವಿದ್ಯುತ್ ತಂತಿಗಳು, ಕಂಬಗಳು ಧರಾಶಾಯಿಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಇಂತಹ ಯಾವುದೇ ಅಪಘಾತ ನಡೆದಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ.  ಇದಕ್ಕಾಗಿ  ಕೆಎಸ್‍ಇಬಿ ನಿಯಂತ್ರಣ ಕೊಠಡಿ 1912 ಅಥವಾ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಂತ್ರಣ ಕೊಠಡಿಯ ಟಾಲ್ ಫ್ರೀ ಸಂಖ್ಯೆ(1077)ಗಳಿಗೆ ಮಾಹಿತಿ ನೀಡುವಂತೆಯೂ ಸಊಚಿಸಲಾಗಿದೆ. 

ಪತ್ರಿಕೆ, ಹಾಲು ಮಾರಾಟಗಾರರಿಗೆ ಎಚ್ಚರಿಕೆ:

           ದಿನಪತ್ರಿಕೆ ಮತ್ತು ಹಾಲು ವಿತರಣೆ ಮಾಡುವವರು ಬೆಳಗಿನ ಜಾವದಲ್ಲಿ ಸಂಚರಿಸಬೇಕಾಗಿರುವುದರಿಂದ ಇಂತಹ ಸಿಬ್ಬಂದಿ ಹೆಚ್ಚು ಜಾಗರೂಕರಾಗಿರಬೇಕು. ರಸ್ತೆ, ಜಲಮೂಲಗಳಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಬಗ್ಗೆಯೂ ಖಾತ್ರಿಪಡಿಸಿಕೊಲ್ಳುವುದರ ಜತೆಗೆ ಯಾವುದೇ ಅಪಘಾತದ ಸಂಶಯವಿದ್ದರೂ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ಯಾವುದೇ ಅಪಾಯವಿಲ್ಲ ಎಂದು ಖಚಿತಪಡಿಸಿಕೊಂಡ ನಂತರವೇ ಮುಂದುವರಿಯುವಂತೆಯೂ ಸೂಚಿಸಲಾಗಿದೆ.

ಕೃಷಿ ಕಾರ್ಯಗಳಿಗಾಗಿ ಹೊಲ, ತೋಟಗಳಿಗೆ ತೆರಳುವ ಕೃಷಿಕರೂ ವಿದ್ಯುತ್ ತಂತಿಗಳ ಸುರಕ್ಷತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.  ಮೂರು ತಾಸುಗಳೊಳಗೆ ಬಾರಿ ಗುಡುಗು, ಮಿಂಚು, ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಬಗ್ಗೆ(ಓಔWಅಂSಖಿ) ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆಯ ವೆಬ್‍ಸೈಟ್http://mausam.imd.gov.in/thanandan  ನಲ್ಲಿ ನಿಯಮಿತವಾಗಿ ಅಪ್‍ಲೋಡ್ ಮಾಡಲಾಗುವುದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಯ;ಲ್ಲಿ ತಿಳಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries