ಹಿಸ್ಸಾರ್: ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದ ಮಂಗವೊಂದಕ್ಕೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು (cataract surgery) ಯಶಸ್ವಿಯಾಗಿ ನೆರವೇರಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಹಿಸ್ಸಾರ್: ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದ ಮಂಗವೊಂದಕ್ಕೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು (cataract surgery) ಯಶಸ್ವಿಯಾಗಿ ನೆರವೇರಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಹಿಸ್ಸಾರನ ಲಾಲಾ ಲಜಪತ್ ರಾಯ್ ಪಶುವೈದ್ಯಕೀಯ ವಿಶ್ಯವಿದ್ಯಾಲಯದ ಅನಿಮಲ್ ಸರ್ಜರಿ ಹಾಗೂ ರೆಡಿಯಾಲಜಿ ವಿಭಾಗ ಈ ಅಪರೂಪದ ಕೆಲಸ ಮಾಡಿದೆ.
ಪ್ರಾಣಿ ಪ್ರಿಯ ಮುನೀಶ್ ಎನ್ನುವರು ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದ ಮಂಗವನ್ನು ನಮ್ಮ ಬಳಿ ತಂದಿದ್ದರು. ಮೊದಲು ಅದಕ್ಕೆ ನಡೆಯಲು ಬರುತ್ತಿರಲಿಲ್ಲ. ಬಳಿಕ ಕಣ್ಣಿನ ಪೊರೆಗೆ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂತು. ಕೂಡಲೇ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ವಿಭಾಗದ ಮುಖ್ಯಸ್ಥ ಆರ್.ಎನ್. ಚೌಧರಿ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಮಂಗ ಚೇತರಿಸಿಕೊಂಡಿದ್ದು ದೃಷ್ಟಿ ಬಂದಿದೆ. ಸದ್ಯ ಓಡಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹರಿಯಾಣದಲ್ಲಿ ಇದೇ ಮೊದಲ ಬಾರಿಗೆ ಪ್ರಾಣಿಯೊಂದಕ್ಕೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.