ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿವಾಹಿನಿಯ ನೇತೃತ್ವದಲ್ಲಿ ನೀರ್ಚಾಲು ಪುದುಕೋಳಿ ಶ್ರೀಸದನದಲ್ಲಿ ಜರಗಿದ ಜೀವನಬೋಧ ಶಿಬಿರ 2024 ರಲ್ಲಿ ಶನಿವಾರ ಬೆಳಗ್ಗೆ `ಪಕ್ಷಿವೀಕ್ಷಣೆ' ನಡೆಸಲಾಯಿತು. ಖ್ಯಾತ ಪಕ್ಷಿತಜ್ಞ, ಶಿಕ್ಷಕ ರಾಜು ಕಿದೂರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪಕ್ಷಿಗಳ ಕುರಿತಾದ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಉರಗಗಳು, ಜೇನು ನೊಣಗಳು ಹಾಗೂ ಇತರ ಕೀಟಗಳಿಗೂ ಪರಿಸರಕ್ಕೂ ಇರುವ ಸಂಬಂಧವನ್ನು ವಿವರಿಸಿದರು. ಪರಿಸರದಲ್ಲಿ ಒಟ್ಟು 18 ವಿವಿಧ ವರ್ಗಗಗಳ ಪಕ್ಷಿಗಳನ್ನು ವೀಕ್ಷಿಸಲಾಯಿತು. ಶಿಬಿರಾರ್ಥಿಗಳು ಪಕ್ಷಿಗಳ ಕುರಿತು ತಮ್ಮ ಅರಿವನ್ನು ಹೆಚ್ಚಿಸಿಕೊಂಡರು. ಶ್ರೀಸದನದ ಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ, ಶೈಲಜಾ, ಶ್ರೀಶ, ವಿದ್ಯಾರ್ಥಿವಾಹಿನಿಯ ಮಂಡಲ ಅಧ್ಯಕ್ಷ ಶ್ಯಾಮಪ್ರಸಾದ ಕುಳಮರ್ವ ಜೊತೆಗಿದ್ದರು.