HEALTH TIPS

ಆಸ್ಟ್ರೇಲಿಯಾ: ಭಾರತದಿಂದ ತೆರಳಿದ ಮಗುವಿನಲ್ಲಿ ಹಕ್ಕಿಜ್ವರ ಪತ್ತೆ

               ಕ್ಯಾನ್‌ಬೆರಾ: ಮಗುವೊಂದರಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ಮಾನವನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣ ಎಂದು ಆಸ್ಟ್ರೇಲಿಯಾ ಹೇಳಿದೆ. ಕೆಲ ವಾರಗಳ ಹಿಂದೆ ಭಾರತದಲ್ಲಿದ್ದಾಗ ಮಗುವಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಸದ್ಯ ಮಗು ಚೇತರಿಸಿಕೊಂಡಿದೆ.


        'ವಿಕ್ಟೋರಿಯಾದಲ್ಲಿ ಮಗುವೊಂದಕ್ಕೆ ಹಕ್ಕಿಜ್ವರ (H5N1) ಇರುವುದು ಪತ್ತೆಯಾಗಿದೆ. ಇದು ದೇಶದ ಮೊದಲ ಪ್ರಕರಣ. ಭಾರತದಲ್ಲಿರುವಾಗ ಸೋಂಕು ತಗುಲಿರಬಹುದು. ಮಾರ್ಚ್‌ನಲ್ಲಿ ಮಗುವಿಗೆ ಅನಾರೋಗ್ಯ ಉಂಟಾಗಿತ್ತು' ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ 9news.com.au ವರದಿ ಮಾಡಿದೆ.

'ಹಕ್ಕಿ ಜ್ವರ ಎಂದೂ ಕರೆಯಲ್ಪಡುವ avian influenza A(H5N1) ಸೋಂಕಿನ ಮಾನವ ಪ್ರಕರಣವು ವಿಕ್ಟೋರಿಯಾದಲ್ಲಿ ವರದಿಯಾಗಿದೆ. ಈ ಸೋಂಕು ಸುಲಭವಾಗಿ ಹರಡುವುದಿಲ್ಲ. ಹೀಗಾಗಿ ಸೋಂಕು ವ್ಯಾಪಿಸಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ' ಎಂದು ವಿಕ್ಟೋರಿಯಾದ ಆರೋಗ್ಯ ಇಲಾಖೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

                'ಮಾರ್ಚ್ 2024ರಲ್ಲಿ ವಿದೇಶದಿಂದ ಭಾರತಕ್ಕೆ ಆಗಮಿಸಿದ ಮಗುವೊಂದರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಗುವಿಗೆ ತೀವ್ರವಾಗಿ ಸೋಂಕು ಭಾದಿಸಿದ್ದು, ಈಗ ಸಂಪೂರ್ಣ ಗುಣಮುಖವಾಗಿದೆ' ಎಂದು ಯಾವುದೇ ದೇಶವನ್ನು ಉಲ್ಲೇಖಿಸದೆ ಮಾಹಿತಿ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries