ಸಮರಸ ಚಿತ್ರಸುದ್ದಿ: ಬದಿಯಡ್ಕ: ನಿರ್ಮಾಣ ಹಂತದಲ್ಲಿರುವ ಎಡನೀರು ಸಮೀಪದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಭಾನುವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ಮಾತೃಸಮಿತಿಯ ನೇತೃತ್ವದಲ್ಲಿ ಊರಪರವೂರ ಭಗವದ್ಭಕ್ತರು ಪಾಲ್ಗೊಂಡು ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು. ಸಂಪೂರ್ಣ ನಶಿಸಿಹೋಗಿದ್ದ ಕ್ಷೇತ್ರವು ಇದೀಗ ನಿರ್ಮಾಣ ಹಂತದಲ್ಲಿದ್ದು, ಷಡಾಧರ ಪ್ರತಿಷ್ಠೆ ಇತ್ತೀಚೆಗೆ ನಡೆದಿತ್ತು.