ಕಾಸರಗೋಡು: ಸಹಕಾರ ಭಾರತೀ ಕಾಸರಗೋಡು ಜಿಲ್ಲಾ ಸಮ್ಮೇಳನ ಮೇ 18ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಲಿದೆ. ಸಹಕಾರ ಭಾರತಿ ರಾಜ್ಯ ಸಮಿತಿ ಉಪಾಧ್ಯಕ್ಷ ಐತ್ತಪ್ಪ ಮವ್ವಾರು ಸಮಾರಂಭ ಉದ್ಘಾಟಿಸುವರು. ತಾಲೂಕು ಸಮಿತಿ ಅಧ್ಯಕ್ಷ ನಾರಾಯಣನ್ ಕಲ್ನಾಡು ಅಧ್ಯಕ್ಷತೆ ವಹಿಸುವರು.
ಕಾಸರಗೋಡು ಟೌನ್ ಕೋಓಪರೇಟಿವ್ ಬ್ಯಾಂಕ್ ಅಧ್ಯಕ್ಷ ಎ.ಸಿ ಅಶೋಕ್ ಕುಮಾರ್, ಸಹಕಾರ ಭಾರತೀ ಎಂಪ್ಲೋಯೀಸ್ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಉದಯ ಬೆಳ್ಳೂರು, ಸಹಕಾರ ಭಾರತೀ ತಾಲೂಕು ಕೋಶಾಧಿಕಾರಿ ಹರಿ ಮಧೂರು, ಕಾರ್ಯದರ್ಶಿ ಗಣಪತಿ ಪ್ರಸಾದ್ ಪಾಲ್ಗೊಳ್ಳುವರು.