HEALTH TIPS

ಕಾಸರಗೋಡು ರೈಲು ನಿಲ್ದಾಣದಲ್ಲಿ ಆದಾಯ ಹೆಚ್ಚಳ

                    ಕಾಸರಗೋಡು: ಕಾಸರಗೋಡು ಮತ್ತು ಕಾಂಞಂಗಾಡ್ ರೈಲು ನಿಲ್ದಾಣಗಳಲ್ಲಿ ಆದಾಯದಲ್ಲಿ ಹೆಚ್ಚಳ ಉಂಟಾಗಿದೆ. ದಕ್ಷಿಣ ರೈಲ್ವೇಯ ಅಧೀನದಲ್ಲಿರುವ ಉತ್ತಮ ಆದಾಯವಿರುವ ರೈಲು ನಿಲ್ದಾಣಗಳಲ್ಲಿ ಕಾಸರಗೋಡಿಗೆ 33 ನೇ ಸ್ಥಾನ ಹಾಗು ಕಾಂಞಂಗಾಡ್‍ಗೆ 58 ನೇ ಸ್ಥಾನವಿದೆ. ರಾಜ್ಯದಲ್ಲಿ ಕಾಸರಗೋಡು ರೈಲು ನಿಲ್ದಾಣ 15 ನೇ ಸ್ಥಾನದಲ್ಲಿದ್ದರೆ, ಕಾಂಞಂಗಾಡ್ 25 ನೇ ಸ್ಥಾನದಲ್ಲಿದೆ. ವಂದೇ ಭಾರತ್ ರೈಲು ಸಂಚಾರ ಆರಂಭಗೊಂಡಿರುವುದು ಕಾಸರಗೋಡನ ಆದಾಯ ಹೆಚ್ಚಳಗೊಳ್ಳಲು ಸಹಾಯಕವಾಯಿತು. 

             ಒಂದು ವರ್ಷ ಪೂರ್ತಿಯಾದ ಕೋಟ್ಟಯಂ ಮೂಲಕವಿರುವ ವಂದೇ ಭಾರತ್ ಹಾಗು ಆಲಪ್ಪುಳ ಮೂಲಕವಿರುವ ದ್ವಿತೀಯ ವಂದೇ ಭಾರತ್ ರೈಲಿಗೆ ಪ್ರಯಾಣಿಕರ ಭಾಗದಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಅಪರಾಹ್ನ 2.30 ಕ್ಕೆ ವಂದೇ ಭಾರತ್ ಕಾಸರಗೋಡಿನಿಂದ ಸಂಚಾರ ಆರಂಭಿಸುವ ಕಾರಣ ಮುಂಗಡ ಕಾಯ್ದಿರಿಸುವಿಕೆಯಲ್ಲೂ ಹೆಚ್ಚಿನ ಪರಿಗಣನೆ ಲಭಿಸುತ್ತಿದೆ. ಉತ್ತರ ಮಲಬಾರ್‍ನ ಅತ್ಯಂತ ಹೆಚ್ಚು ಆದಾಯವಿರುವ ರೈಲು ನಿಲ್ದಾಣಗಳಲ್ಲಿ ತಲಶ್ಶೇರಿಯನ್ನು ಹಿಂದಿಕ್ಕಲು ಕಾಸರಗೋಡಿಗೆ ಇದರಿಂದ ಸಾಧ್ಯವಾಗಿದೆ. ಕಳೆದ ವರ್ಷ ತಲಶ್ಶೇರಿಯ ಬಳಿಕದ ಸ್ಥಾನದಲ್ಲಿ ಕಾಸರಗೋಡು ರೈಲು ನಿಲ್ದಾಣವಿತ್ತು. ಈ ಬಾರಿ ಸ್ಥಿತಿ ಉತ್ತಮಪಡಿಸಿಕೊಂಡಿದೆ. 24.03 ಲಕ್ಷ ಪ್ರಯಾಣಿಕರು ಕಳೆದ ವರ್ಷ ಕಾಸರಗೋಡಿನಿದ ಪ್ರಯಾಣ ಗೈದಿದ್ದಾರೆ. 33.59 ಕೋಟಿ ರೂ. ಈ ರೀತಿಯಲ್ಲಿ ಆದಾಯ ಲಭಿಸಿದೆ. ಈ ಆದಾಯ ಈ ವರ್ಷ 47 ಕೋಟಿ ರೂ. ಆಗಿ ಹೆಚ್ಚಳವಾಗಿದೆ. ಕಾಂಞಂಗಾಡ್ ರೈಲು ನಿಲ್ದಾಣದಲ್ಲಿ 18.23 ಕೋಟಿ ರೂ. ಆದಾಯ ಲಭ್ಯವಾಗಿದೆ. ಇದೇ ವೇಳೆ ಕಳೆದ ವರ್ಷ 16.75 ಕೋಟಿ ರೂ. ಆಗಿತ್ತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries