ಹಮೀರ್‌ಪುರ/ ಶಿಮ್ಲಾ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಸುಲ್ತಾನ್‌ಪುರಿ ಅವರು ಕ್ರಮವಾಗಿ ಹಮೀರ್‌ಪುರ ಹಾಗೂ ಶಿಮ್ಲಾ ಲೋಕಸಭಾ ಕ್ಷೇತ್ರಗಳಿಂದ ಸೋಮವಾರ ನಾಮಪತ್ರ ಸಲ್ಲಿಸಿದರು.
ಹಮೀರ್‌ಪುರ/ ಶಿಮ್ಲಾ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಸುಲ್ತಾನ್‌ಪುರಿ ಅವರು ಕ್ರಮವಾಗಿ ಹಮೀರ್‌ಪುರ ಹಾಗೂ ಶಿಮ್ಲಾ ಲೋಕಸಭಾ ಕ್ಷೇತ್ರಗಳಿಂದ ಸೋಮವಾರ ನಾಮಪತ್ರ ಸಲ್ಲಿಸಿದರು.
ಅನುರಾಗ್ ನಾಮಪತ್ರ ಸಲ್ಲಿಸುವಾಗ ಅವರ ಸಹೋದರ, ಇಂಡಿಯನ್ ಪ್ರೀಮಿಯರ್ ಲೀಗ್ ಮುಖ್ಯಸ್ಥ ಅರುಣ್ ಧುಮಾಲ್ ಹಾಗೂ ಬಿಜೆಪಿ ಮುಖಂಡರು ಜತೆಗಿದ್ದರು.
ಕಾಂಗ್ರೆಸ್ ಪಕ್ಷವು ಅನುರಾಗ್ ವಿರುದ್ಧ ಉನಾ ಕ್ಷೇತ್ರದ ಮಾಜಿ ಶಾಸಕ ಸತ್ಪಾಲ್ ರಾಯಜಾದಾ ಅವರನ್ನು ಕಣಕ್ಕಿಳಿಸಿದೆ.
ಶಿಮ್ಲಾದಲ್ಲಿ ಹಾಲಿ ಸಂಸದ ಕಾಂಗ್ರೆಸ್‌ನ ವಿನೋದ್ ಸುಲ್ತಾನ್‌ಪುರಿ ಅವರು ನಾಮಪತ್ರ ಸಲ್ಲಿಸುವಾಗ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್ ಮತ್ತು ಸಚಿವ ಹರ್ಷವರ್ಧನ್ ಚೌಹಾಣ್ ಜತೆಗಿದ್ದರು.